ಪಾಲಕ್ಕಾಡ್: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಬಾಧೆಗೊಳಗಾದ ಗೃಹಿಣಿಯೋರ್ವೆ ಮಂಗಳವಾರ ಮೃತಪಟ್ಟಿದ್ದಾರೆ. ಮೃತರÀನ್ನು ಪಾಲಕ್ಕಾಡ್‍ನ ಕೊಟ್ಟಶೇರಿ ನಿವಾಸಿ ವಸಂತ (48) ಎಂದು ಗುರುತಿಸಲಾಗಿದೆ. ತೀವ್ರ ನಿಗಾದಲ್ಲಿದ್ದ ಅವರು ಸಂಜೆ ನಿಧನರಾದರು.
ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದ ವಸಂತರನ್ನು ಚಿಕಿತ್ಸೆಗಾಗಿ ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರದ ವೇಳೆಗೆ ಅವರ ಆರೋಗ್ಯ ಹದಗೆಟ್ಟು ತೀವ್ರ ಸ್ವರೂಪ ಪಡೆದರು.
ಈವರೆಗೆ ರಾಜ್ಯದಲ್ಲಿ 49 ಮಂದಿ ಜನರಿಗೆ ಕಪ್ಪು ಶಿಲೀಂಧ್ರ ಇರುವುದು ಪತ್ತೆಯಾಗಿದೆ. ಈ ರೋಗಿಗಳಲ್ಲಿ ಹೆಚ್ಚಿನವರು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿ ಔಷಧಿಗಳ ತೀವ್ರ ಕೊರತೆ ಇದೆ. ವೈದ್ಯಕೀಯ ಕಾಲೇಜಿನಲ್ಲಿ ಹದಿನೆಂಟು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಲಪ್ಪುರಂ, ಕೋಝಿಕೋಡ್, ತ್ರಿಶೂರ್, ಪಾಲಕ್ಕಾಡ್, ಎರ್ನಾಕುಳಂ, ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟು, ಕೊಟ್ಟಾಯಂ, ಕಣ್ಣೂರು, ವಯನಾಡ್ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಇದುವರೆಗೆ ಕಪ್ಪು ಶಿಲೀಂಧ್ರ ದೃಢಪಡಿಸಲಾಗಿದೆ.