ಕಾಸರಗೋಡು: ಅತ್ಯಾಧುನಿಕ ತಾಂತ್ರಿಕತೆಯೊಂದಿಗೆ ಲೋಕೋಪಯೋಗಿ ಇಲಾಖೆ ಪ್ರಬಲಗೊಂಡಿದೆ ಎಂದು ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ತಿಳಿಸಿದರು.
ಅವರು ಬುಧವಾರ ಸಂಜೆ ಪೆರುಂಬಟ್ಟ ಸೇತುವೆ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಜಿಲ್ಲೆಯ ಪ್ರತ್ಯೇಕತೆಗೆ ಅನುಸಾರವಾಗಿ ವಿವಿಧ ಯೋಜನೆಗಳನ್ನು ರಚಿಸಿ ಅಭಿವೃದ್ಧಿ ನಡೆಸಲಾಗುವುದು. ಪಿ.ಡಬ್ಲ್ಯೂ.ಡಿ. ಫಾರ್ ಯೂ ಆಪ್ ಮೂಲಕ ಪ್ರತಿ ಪ್ರದೇಶದ ಸಮಸ್ಯೆಗಳನ್ನು ಲೋಕೋಪಯೋಗಿ ಇಲಾಖೆ ಅರಿತುಕೊಳ್ಳುತ್ತಿದೆ. ಇಲಾಖೆಯ ನಿಯಂತ್ರಣ ಕೊಠಡಿ ಸಚಿವರ ನೇರ ಮೇಲ್ನೋಟದಲ್ಲಿ ಚಟುವಟಿಕೆ ನಡೆಸುತ್ತಿದೆ. ಜನ ಎತ್ತುವ ಧ್ವನಿ ಮೂಲಕ ನಾಡಿನ ಸಮಸ್ಯೆಗಳು ಬಗೆಹರಿಯುತ್ತಿವೆ. ಜನಪ್ರತಿನಿಧಿಗಳು ನೇರವಾಗಿ ಇಲಾಕೆಯೊಂದಿಗೆ ಚಟುವಟಿಕೆ ನಡೆಸುವ ವ್ಯವಸ್ಥೆ ಬಗ್ಗೆ ಆಲೋಚನೆಗಳು ನಡೆಯುತ್ತಿವೆ ಎಂದವರು ತಿಳಿಸಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ನೀಲೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ, ಪರಪ್ಪ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ವಂದಿಸಿದರು.