ಕಾಸರಗೋಡು: ಪರಿಸರ ದಿನಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಶನಿವಾರ ಬಲ್ಲ ಈಸ್ಟ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
"ಮಣ್ಣಿಗೆ ಹಸುರು ಹೊದೆಸೋಣ" ಎಂಬ ಒಂದು ವರ್ಷ ಅವಧಿಯ ಯೋಜನೆಗೂ ಈ ವೇಳೆ ಚಾಲನೆ ಲಭಿಸಿದೆ. ಕೋವಿಡ್ ಕಟ್ಟುನಿಟ್ಟು ಪಾಲಿಸಿ ಜಿಲ್ಲೆಯ 52 ಯೂನಿಟ್ ಗಳ 2500 ಮಂದಿ ಎನ್.ಎಸ್.ಎಸ್. ಸ್ವಯಂಸೇವಕರು ಮನೆಗಳಲ್ಲಿ ಮರವಾಗಿ ಬೆಳೆಯಬಲ್ಲ ಸಸಿಗಳನ್ನು ನೆಡುವುದು, ಪರಿಸರ ಸಂರಕ್ಷಣೆ ಸಂಬಂಧ ಜನಜಾಗೃತಿ ಮೂಡಿಸುವುದು ಇತ್ಯಾದಿ ಈ ಯೋಜನೆಯ ಅಂಗವಾಗಿ ನಡೆಯಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ಹೈಯರ್ ಸೆಕೆಂಡರಿ ವಿಭಾಗ, ನ್ಯಾಷನಲ್ ಸರ್ವೀಸ್ ಸ್ಕೀಂ(ಎನ್.ಎಸ್.ಎಸ್.) ಜಂಟಿ ವತಿಯಿಂದ ಸಮಾರಂಭ ನಡೆಯಿತು. ಕಾಞಂಗಾಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಉದ್ಘಾಟಿಸಿದರು. ಕಾಞಂಗಾಡು ನಗರಸಭೆ ಸದಸ್ಯೆ ಕೆ.ಲತಾ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಜಿಲ್ಲಾ ಸಂಚಾಲಕ ವಿ.ಹರಿದಾಸ್, ಪ್ರಾಂಶುಪಾಲ ಪಿ.ಎಂ.ಬಾಬು, ಮುಖ್ಯಶಿಕ್ಷಕಿ ಜಾಯ್ ಸಿ.ಸಿ., ನ್ಯಾಯವಾದಿ ವೇಣುಗೋಪಾಲನ್ ಸಿ., ಪ್ರವೀಣ್ ಕುಮಾರ್, ಕೆ.ವಿ.ರತೀಶ್, ಸುಧಾಕರನ್ ನಡಯಿಲ್ ಮೊದಲಾದವರು ಉಪಸ್ಥಿತರಿದ್ದರು.