ಜಾಗತಿಕ ಪರಿತಾಪಕ್ಕೆ ಕಾರಣವಾದ ಕೊರೊನ ಮಹಾಮಾರಿ ಉಂಟುಮಾಡುತ್ತಿರುವ ಸಂಕಷ್ಟಗಳು ಜನಜೀವನವನ್ನು ಜರ್ಜರಿತಗೊಳಿಸಿವೆ. ಹಲವಾರು ಕ್ಷೇತ್ರಗಳಲ್ಲಿ ಗೊಂದಲ,ಸವಾಲುಗಳು ಸೃಷ್ಟಿಗೊಂಡಿರುವ ಈ ಕಾಲಘಟ್ಟ ಮಾನವನ ಬದುಕಿನಲ್ಲಿ ಹೊಸ ಮಗ್ಗುಲಿನ ಹುಟುಕಾಟದ ಅನಿವಾರ್ಯತೆಗೆ ಕಾರಣವಾಗುತ್ತಿದೆ.
ಕನ್ನಡ ನಾಡಿನ ಹೆಮ್ಮೆಯ ಕಲಾ ಪ್ರಕಾರವಾದ ಯಕ್ಷಗಾನಕ್ಕೂ ಕೋವಿಡ್ ಸಂಕಷ್ಟ ವ್ಯಾಪಕವಾಗಿ ಆವರಿಸಿದೆ. ಸಾವಿರಾರು ಕಲಾವಿದರು,ಕಲಾ ಸಂಬಂಧಿ ವೃತ್ತಿಯ ಅನೇಕರು ದಿಕ್ಕೆಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸೋಂಕಿನ ಆಘಾತ ಉಂಟುಮಾಡಿರುವ ಸವಾಲುಗಳನ್ನು ವಿಶ್ಲೇಶಿಸುವ ಯತ್ನ ಸಮರಸ ಸುದ್ದಿಯ ಈ ಅವತರಣಿಕೆ.
ತೆಂಕುತಿಟ್ಟಿನ ಯಕ್ಷಗಾನ ವೇಷಭೂಷಣದಲ್ಲಿ ಅಗ್ರಮಾನ್ಯರಾದವರು ಪ್ಯೆವಳಿಕೆಯ ಗಣೇಶ ಕಲಾವೃಂದ. ದೇವಕಾನದ ದಿ.ಕೃಷ್ಣ ಭಟ್ ಅವರಿಂದ ರೂಪಿಸಲ್ಪಟ್ಟ ಈ ವ್ಯವಸ್ತೆ ಜಗದಗಲ ನೆಗಳ್ತೆಗೊಳಗಾಗಿರುವುದು ಗಡಿನಾಡಿನ ಹೆಮ್ಮೆ. ಪ್ರಸ್ತುತ ಅವರ ಸುಪುತ್ರ ಶ್ರೀಕೃಷ್ಣ ದೇವಕಾನ ಅವರ ಸಮರ್ಥ ನಿರ್ದೇಶನದಲ್ಲಿ ಮುನ್ನಡೆಯುವ ಕಲಾವೃಂದದ ಮೂಲಕ ನಾಡಿನ ಉದ್ದಗಲ ವೇಶಭೂಷಣ,ಪರಿಕರಗಳಿಗೆ ಬೇಡಿಕೆ ಇದೆ. ಹಲವರು ತಂಡದಲ್ಲಿ ಪೂರ್ಣಪ್ರಮಾಣದಲ್ಲಿ ಉದ್ಯೋಗಿಗಳೂ ಅಗಿದ್ದಾರೆ. ಈ ಮಧ್ಯೆ ಕೋವಿಡ್ ಕಾರಣ ಒಟ್ಟು ಯಕ್ಷಗಾನದ ಮೇಲೆ ಉಂಟಾಗಿರುವ ಗೊಂದಲಗಳ ಬಗ್ಗೆ ಶ್ರೀಕೃಷ್ಣ ದೇವಕಾನರು ಮಾತಿನ ವಿಶ್ಲೇಷಣೆ ನಡೆಸಿದ್ದಾರೆ.
ವೀಕ್ಷಿಸಿ......ಪ್ರೋತ್ಸಾಹಿಸಿ.