ಕಾಸರಗೋಡು: ವೀರಮಲೆ ಪ್ರವಾಸೋದ್ಯಮ ಯೋಜನೆ ಸಂಬಂಧ ಉನ್ನತ ಮಟ್ಟದ ಸಭೆ ಜರುಗಿತು.
ಶಾಸಕ ಎಂ.ರಾಜಗೋಪಾಲನ್ ಮತ್ತು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಸಮಕ್ಷದಲ್ಲಿ ಸಭೆ ನಡೆಯಿತು. ಬಹುಭಾಷಾ ಸಂಗಮ ಭೂಮಿ ಕಾಸರಗೋಡು ಜಿಲ್ಲೆಯ ಪರಂಪರಾಗತ ಕಲಾಗ್ರಾಮವಾಗಿ ವೀರಮಲೆಯನ್ನು ಮಾರ್ಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಅರಣ್ಯೀಕರ ಸಮಿತಿ ರಚಿಸಿ ಪ್ರಕೃತಿಸ್ನೇಹಿ ಪ್ರವಾಸೋದ್ಯಮ ಯೋಜನೆ ಜಾರಿಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜೊತೆಗೆ ಕಂದಾಯ ಇಲಾಖೆ ವ್ಯಾಪ್ತಿ ಪ್ರದೇಶದಲ್ಲಿ ಬಿ.ಆರ್.ಡಿ.ಸಿ. ಮುಖಾಂತರ ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ ಕೈಗೊಳ್ಳುವ ಕ್ರಮಗಳನ್ನು ತೀರ್ಮಾನಿಸಲಾಗಿದೆ.ಯೋಜನೆಯ ಅಂಗವಾಗಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಇತ್ಯಾದಿಗಳ ಬಗ್ಗೆ ಚರ್ಚಿಸಲಾಯಿತು.
ಪ್ರವಾಸೋದ್ಯಮ ಡೆಪ್ಯೂಟಿ ಡೈರೆಕ್ಟರ್ ಥಾಮಸ್ ಆಂಟನಿ, ನೀಲೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ, ಚೆರುವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್, ಚೆರುವತ್ತೂರು ಗ್ರಾಮಾಧಿಕಾರಿ ಬಿಜು, ಬಿ.ಆರ್.ಡಿ.ಸಿ. ಸಿಬ್ಬಂದಿ ಸುನಿಲ್ ಕುಮಾರ್, ರಜಿತಾ, ಯೋಜನೆಯ ಆರ್ಕಿಟೆಕ್ಟ್ ಮಧುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.