ಕೊಚ್ಚಿ: ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ವಿರುದ್ಧದ ಹೇಳಿಕೆ ನೀಡಿ ದೇಶದ್ರೋಹ ಆರೋಪ ಎದುರಿಸುತ್ತಿರುವ ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಪೊಲೀಸರ ಮುಂದೆ ಹಾಜರಾಗಿದ್ದಾರೆ.
ಸುಲ್ತಾನಾ ತನ್ನ ವಕೀಲರೊಂದಿಗೆ ನಿನ್ನೆ ಸಂಜೆ 4.30ರ ಸುಮಾರಿಗೆ ಕರವಟ್ಟಿ ಪೊಲೀಸರ ಮುಂದೆ ಹಾಜರಾದರು. ಲಕ್ಷದ್ವೀಪದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುಲ್ತಾನನ ವಿಚಾರಣೆ ನಡೆಯುತ್ತಿದೆ.
ಕೇರಳ ಹೈಕೋರ್ಟ್ ಒಂದು ವಾರ ಚಿತ್ರ ನಿರ್ಮಾಪಕಿಗೆ ಮಧ್ಯಂತರ ನಿರೀಕ್ಷಿತ ಜಾಮೀನು ನೀಡಿತ್ತು. ಆದರೆ ಜೂನ್ 20ರಂದು ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಿತ್ತು.
ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಸಿ ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನ ಮೇರೆಗೆ ಕವರಟ್ಟಿ ಪೊಲೀಸರು ಭಾರತೀಯ ದಂಡ ಸಂಹಿತೆಯ(ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜೂನ್ 10ರಂದು ಆಯಿಷಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಮಲಯಾಳಂ ಟಿವಿ ಚಾನೆಲ್ ನಲ್ಲಿ ಸಂದರ್ಶನವೊಂದರಲ್ಲಿ ಕೇಂದ್ರ ಸರ್ಕಾರ ಲಕ್ಷದ್ವೀಪದ ಮೇಲೆ ಜೈವಿಕ ಬಾಂಬ್ ದಾಳಿ ನಡೆಯುತ್ತಿದೆ ಎಂದು ಕಿಡಿಕಾರಿದ್ದರು.