ಗುವಾಹಟಿ: ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಈಶಾನ್ಯ ಪ್ರದೇಶದ ಭೌಗೋಳಿಕತೆ, ಸಂಸ್ಕೃತಿ, ಜನಾಂಗೀಯತೆ ಮತ್ತು ಜನರ ಜೀವನಶೈಲಿ ಬಗ್ಗೆ ಒಂದು ಅಧ್ಯಾಯವನ್ನು ಸೇರಿಸಬೇಕೆಂದು ಒತ್ತಾಯಿಸಿ ಈಶಾನ್ಯದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಇತರರು ಟ್ವೀಟ್ ಮಾಡುವ ಮೂಲಕ 'ಟ್ವಿಟರ್‌ನಲ್ಲಿ ಸುನಾಮಿ' ಎಬ್ಬಿಸಿದರು.
ಈಶಾನ್ಯದವರ ವಿರುದ್ಧ ಮುಖ್ಯ ಭೂಭಾಗದವರ ಒಂದು ಭಾಗದಿಂದ ಜನಾಂಗೀಯ ಕೆಸರೆರಚಾಟದ ಬಗ್ಗೆ ಪುನರಾವರ್ತಿತ ಟೀಕೆಗಳಾಗುತ್ತಿದ್ದು ಅವುಗಳನ್ನು ಎನ್‌ಸಿಇಆರ್‌ಟಿನಲ್ಲಿ ಸೇರಿಸಿ ಅಧ್ಯಾಯನದ ವಸ್ತುವಾಗಿಸಿ ಎಂದು ಟ್ವೀಟ್ ಮಾಡುತ್ತಿದ್ದಾರೆ.
ಟ್ವೀಟ್ ನಲ್ಲಿ #AChapterForNEIndia ಮತ್ತು #NortheastMatters ಕಾಮೆಂಟ್‌ಗಳಿಂದ ತುಂಬಿಹೋಗಿದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ಅಧಿಕಾರಗಳಿಗೆ ಟ್ಯಾಗ್ ಮಾಡಲಾಗಿದೆ.
ಈಶಾನ್ಯ ವಿದ್ಯಾರ್ಥಿಗಳ ಸಂಘಟನೆಯ ಸಲಹೆಗಾರರಾಗಿರುವ ಸಮುಜ್ಜಲ್ ಭಟ್ಟಾಚಾರ್ಯ ಟ್ವೀಟ್ ಮಾಡಿ, 'ಭಾರತದ ಬೇರ್ಪಡಿಸಲಾಗದ ಭಾಗವಾಗಿ ನಮ್ಮ ಅಸ್ತಿತ್ವವಿದೆ ಎಂಬುದರ ಬಗ್ಗೆ ಅಜ್ಞಾನಿಗಳಾದ ಮುಖ್ಯ ಭೂಭಾಗದವರಿಗೆ ತಿಳಿದಿಲ್ಲವೆಂದು ತೋರುತ್ತದೆ. ಶ್ರೀಮಂತ ಪರಂಪರೆ, ವಿಲಕ್ಷಣ ಸಸ್ಯ/ಪ್ರಾಣಿ ಮತ್ತು ನಿಷ್ಪಾಪ ಸಂಸ್ಕೃತಿಯ ಭೂಮಿ, ಈಶಾನ್ಯ ರಾಜ್ಯಗಳು ಕೇವಲ ಸಂಪನ್ಮೂಲ ಗಡಿನಾಡುಗಿಂತ ಹೆಚ್ಚಾಗಿವೆ ಎಂದು #AChapterForNEIndia ಮತ್ತು #NortheastMatters ಹ್ಯಾಶ್ ಟ್ಯಾಗ್ ಸೃಷ್ಟಿಸುವ ಮೂಲಕ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಿದರು.
ಕೇಂದ್ರ ಮಾಜಿ ಸಚಿವ ಮತ್ತು ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕ ನಿನೊಂಗ್ ಎರಿಂಗ್ ವಿರುದ್ಧ ಜನಾಂಗೀಯ ಗೊಂದಲ ಸೃಷ್ಟಿಸಲಾಗಿತ್ತು. ಯೂಟ್ಯೂಬರ್ ಪರಸ್ ಸಿಂಗ್ ಎಂಬಾತ ವಿಡಿಯೋ ಮಾಡಿ ಅದರಲ್ಲಿ ನಿನೊಂಗ್ ಎರಿಂಗ್ ರನ್ನು 'ಭಾರತೀಯನಲ್ಲ' ಎಂದು ಹೇಳಿದ್ದು ಅಲ್ಲದೆ ಅರುಣಾಚಲ ಚೀನಾದ ಒಂದು ಭಾಗ ಎಂದು ಕರೆದಿದ್ದನು. ಈ ಕಾಮೆಂಟ್‌ಗಳು ಈಶಾನ್ಯದಲ್ಲಿ ಆಕ್ರೋಶಕ್ಕೆ ಕಾರಣವಾದ ನಂತರ ಪರಸ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದರು.
ಎರಿಂಗ್ ಶುಕ್ರವಾರ ಟ್ವೀಟ್ ಮಾಡಿ ಇಂದು, ನಾನು ಟ್ವಿಟರ್ ಸುನಾಮಿಗೆ ಪ್ರತಿನಿಧಿಯಾಗಿ ಮಾತ್ರವಲ್ಲದೆ ಈಶಾನ್ಯ ಭಾರತದ ಸಾಮಾನ್ಯ ನಾಗರಿಕನಾಗಿಯೂ ಸೇರಿದ್ದೇನೆ. ಜಗತ್ತು ನಮ್ಮ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ನಮ್ಮ ಇತಿಹಾಸ, ಭೌಗೋಳಿಕತೆ, ಸಂಸ್ಕೃತಿ ಮತ್ತು ಇತರ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಟ್ವೀಟಿಸಿದ್ದರು.