HEALTH TIPS

ಭವಿಷ್ಯವನ್ನು ಕಟ್ಟಲು ಭೂತಕಾಲದ ಆಳವಾದ ಅಧ್ಯಯನ ಅಗತ್ಯ- ಸಿ. ಬಸವಲಿಂಗಯ್ಯ

                                   

                ಕಾಸರಗೋಡು: ಕನ್ನಡ ರಂಗಭೂಮಿಯ ಪರಂಪರೆ ಬಹಳ ಪ್ರಾಚೀನವಾದುದು. ರಂಗಭೂಮಿಯ ಸಶಕ್ತವಾದ ಬೆಳವಣಿಗೆಗೆ ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಗಳು ಅವುಗಳದ್ದೇ ಆದ ಕೊಡುಗೆ ನೀಡಿವೆ. ರಂಗಭೂಮಿಯ ಬಗೆಗೆ ಆಸಕ್ತಿಯುಳ್ಳ ಪ್ರತಿಯೊಬ್ಬರೂ ಆ ಕ್ಷೇತ್ರವನ್ನು ಪ್ರವೇಶಿಸಬೇಕಾದರೆ ರಂಗಭೂಮಿ ಬೆಳೆದು ಬಂದ ಬಗೆಯನ್ನು ತಿಳಿದುಕೊಳ್ಳಬೇಕು. ವರ್ತಮಾನದಲ್ಲಿ ನಿಂತು ಭವಿಷ್ಯವನ್ನು ಕಟ್ಟಲು ಭೂತಕಾಲದ ಅಧ್ಯಯನ ಅಗತ್ಯ ಎಂಬುದಾಗಿ ರಂಗಭೂಮಿ ನಿರ್ದೇಶಕ ಸಿ. ಬಸವಲಿಂಗಯ್ಯ ಅಭಿಪ್ರಾಯಪಟ್ಟರು. 

           ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ  ಕನ್ನಡ ವಿಭಾಗವು ಆಯೋಜಿಸಿದ ಸರಣಿ ಉಪನ್ಯಾಸ *ಸಾಹಿತ್ಯಯಾನ*ದ ಮೂರನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. 

           ಆಧುನಿಕ ಕನ್ನಡ ರಂಗಭೂಮಿ:ಯುವಕರು ಮತ್ತು ವೃತ್ತಿಪರತೆ* ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು ಉತ್ತಮ ರಂಗಪಠ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಾಟಕಗಳ ನಿರ್ಮಾಣ ಹಾಗೂ ಪ್ರದರ್ಶನ ನಡೆಸಿದರೆ ಅದು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದರು. ರಾಷ್ಟ್ರಕವಿ ಕುವೆಂಪು ಅವರ *ಮಲೆಗಳಲ್ಲಿ ಮದುಮಗಳು* ಕಾದಂಬರಿಯನ್ನು ನಾಟಕವಾಗಿ ಪ್ರದರ್ಶಿಸಿದಾಗ ಜನರದನ್ನು ಸ್ವೀಕರಿಸಿದ್ದು, ಕುವೆಂಪು ಅವರನ್ನು ಲಕ್ಷಾಂತರ ಮಂದಿಗೆ ತಲುಪಿಸುವುದಕ್ಕಿದು ಕಾರಣವಾಯಿತು. ಆ ಮೂಲಕ ಹಿಂದಿನ ಕಾಲಘಟ್ಟದ ಜೀವನ ವಿಧಾನವನ್ನು ಯುವ ಜನತೆಗೆ ತಿಳಿಸುವುದಕ್ಕೂ, ಕನ್ನಡ ಸಾಹಿತ್ಯದತ್ತ ಯುವ ಜನರು ಆಸಕ್ತಿ ವಹಿಸುವಂತೆ ಮಾಡುವುದಕ್ಕೂ ಸಾಧ್ಯವಾಗಿದೆ ಎಂದರು. ತಾಳ್ಮೆ, ನಿರಂತರ ಪರಿಶ್ರಮ ಹಾಗೂ ಸಕಾರಾತ್ಮಕ ಚಿಂತನೆ ಒಬ್ಬ ರಂಗಭೂಮಿ ನಿರ್ದೇಶಕನ ಯಶಸ್ಸಿಗೆ ಹೇಗೆ ಕಾರಣವಾಗಬಲ್ಲುದು ಎಂಬುದನ್ನು ಅವರು ತಮ್ಮದೇ ಬದುಕಿನ ವಿವಿಧ ಅನುಭವಗಳ ಹಿನ್ನೆಲೆಯಲ್ಲಿ ವಿವರಿಸಿದರು.

            ನಾಡೋಜ ಡಾ. ಸಿದ್ಧಲಿಂಗಯ್ಯ ಅವರ ಗರಡಿಯಲ್ಲಿ ಪಳಗಿದವನು ತಾನು* ಎಂದ ಅವರು  ಸಿದ್ಧಲಿಂಗಯ್ಯ ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿದರು.

ಕೇಂದ್ರೀಯ ವಿ.ವಿ ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಮೋಹನ್ ಎ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. *ಸಮುದಾಯದಲ್ಲಿ ಬೆರೆಯುವುದಕ್ಕೆ ಭಾಷೆ ಅತೀ ಮುಖ್ಯವಾದುದು. ಅದರ ಸಾಮಥ್ರ್ಯ ಪರಸ್ಪರ ಸಂಬಂಧ ಬೆಸೆಯುವುದಕ್ಕೆ ಕಾರಣವಾಗುತ್ತದೆ* ಎಂದ ಅವರು ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಹೊರನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಮಹತ್ವಪೂರ್ಣ ಕೆಲಸದಲ್ಲಿದ್ದು ಎಲ್ಲರ ಸಹಕಾರದಿಂದ ಮಾತ್ರವೇ ಇದು ಸಾಧ್ಯವಾಗಲಿದೆ ಎನ್ನುತ್ತಾ ನಿಧನರಾದ ದಲಿತ ಕವಿ ಡಾ. ಸಿದ್ಧಲಿಂಗಯ್ಯ ಅವರೊಂದಿಗಿನ ಒಡನಾಟದ ನೆನಪನ್ನು ಹಂಚಿಕೊಂಡರು.

ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಆಯೋಗದ ಉಪ ಸಲಹೆಗಾರರಾದ ಡಾ. ತ್ಯಾಗರಾಜು ಬಿ.ಎಂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ ನಾಡೋಜ ಡಾ. ಸಿದ್ಧಲಿಂಗಯ್ಯ ಅವರಿಗೆ ನುಡಿ ನಮನವನ್ನು ಸಲ್ಲಿಸಲಾಯಿತು.

           ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ನವ್ಯಶ್ರೀ ಸ್ವಾಗತಿಸಿ, ಸ್ವಾತಿ ಜಿ  ಧನ್ಯವಾದವನ್ನು ಸಮರ್ಪಿಸಿದರು. ಅಕ್ಷತಾ ಟಿ.ಜಿ ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries