ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ನನ್ನು ಎನ್ ಡಿಎ ಮಿತ್ರ ಪಕ್ಷದ ಜಿತನ್ ರಾಮ್ ಮಾಂಜಿ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ಹಿಂದೂಸ್ತಾನ್ ಆವಾಮಿ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಜಿ ಅವರ ನಿವಾಸದಲ್ಲಿ ಲಾಲೂ ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ ಜೊತೆ ರಹಸ್ಯ ಮಾತುಕತೆ ನಡೆದಿದೆ.
ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಲಾಲೂ ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿದ್ದ ಮಾಂಜಿ ಜನ್ಮ ದಿನದ ಶುಭಾಶಯ ಕೋರಿದ್ದರು.
ಮಾಂಜಿ ಅವರು ಎನ್ ಡಿಎ ಮೈತ್ರಿ ಕೂಟ ತೊರೆದು ಮಹಾಘಟಬಂದನ್ ಗೆ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ತಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುವುದಾಗಿ ಇತ್ತೀಚೆಗೆ ತೇಜ್ ಪ್ರತಾಪ್ ಹೇಳಿದ್ದರು.