ತಿರುವನಂತಪುರ: ಕೊರೋನಾ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಗೊಂದಲವಿದೆ ಎಂಬ ದೂರುಗಳು ವ್ಯಾಪಕಗೊಳ್ಳುತ್ತಿದೆ. ಲಾಕ್‌ಡೌನ್ ನಿರ್ಬಂಧಗಳನ್ನು ಸರಳಗೊಳಿಸುವ ಭಾಗವಾಗಿ, ಶೂ ಅಂಗಡಿಗಳು, ಆಭರಣದ ಅಂಗಡಿಗಳು ಮತ್ತು ಬಟ್ಟೆ ಮಳಿಗೆ ಸಹಿತ ಚಿಲ್ಲರೆ ವ್ಯಾಪಾರಿಗಳಿಗೆ ವಾರದಲ್ಲಿ ಮೂರು ದಿನ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಮದುವೆಗೆ ವಿವಿಧ ವಸ್ತುಗಳನ್ನು ಖರೀದಿಸಲು ಬರುವವರು ಆಹ್ವಾನ ಪತ್ರಿಕೆ ತೋರಿಸಬೇಕು ಎಂಬ ಷರತ್ತು ಸಮಸ್ಯೆಗೆ ಕಾರಣವಾಗಿ ಆಕ್ಷೇಪಣೆ ಕೇಳಿಬಂದಿದೆ .
ಮಂಗಳವಾರ ಹೊರಡಿಸಿದ ಹೊಸ ಆದೇಶವು ಜನರನ್ನು ಗೊಂದಲಕ್ಕೀಡು ಮಾಡಿದೆ. ಒಟ್ಟು 20 ಜನರಿಗೆ ಮಾತ್ರ ವಿವಾಹ ಸಮಾರಂಭದಲ್ಲಿ ಹಾಜರಾಗಲು ಅವಕಾಶ ನೀಡಿದೆ. ಅದೂ ನಿಕಟ ಸಂಬಂಧಿಗಳಿಗೆ ಮಾತ್ರ. ಸಣ್ಣ ಪ್ರಮಾಣದ ಮದುವೆಗೆ ಆಹ್ವಾನ ಪತ್ರವನ್ನು ಯಾರೂ ತಯಾರಿಸುವ ಗೋಜಿಗೇ ಹೋಗುವುದಿಲ್ಲ. ಆದರೆ ಆಮಂತ್ರ ಸಿದ್ಧಪಡಿಸಬಹುದು ಎಂದು ಭಾವಿಸಿದರೂ ಮುದ್ರಣ ಅಂಗಡಿಗಳನ್ನು ತೆರೆಯಲು ಇನ್ನೂ ಅನುಮತಿಸಿಲ್ಲ. ಹಾಗಿದ್ದರೆ ಎಲ್ಲಿ,ಹೇಗೆ ಆಹ್ವಾನ ಪತ್ರಿಕೆ ಸಿದ್ದಗೊಳಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸುವವರೂ ಇಲ್ಲವಾಗಿದ್ದಾರೆ.
ಜೊತೆಗೆ ಇನ್ನೊಂದು ವಿಲಕ್ಷಣ ಸಲಹೆಯೆಂದರೆ, ಆಟೋ ಬಿಡಿಭಾಗಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಒಂದು ದಿನ ಮತ್ತು ಇನ್ನೊಂದು ದಿನ ದುರಸ್ಥಿ ಅಂಗಡಿ(ಗ್ಯಾರೇಜ್) ತೆರೆಯಲು ಅವಕಾಶ ನೀಡಲಾಗಿವದೆ. ಸ್ಟೇಷನರಿ ಅಂಗಡಿಗಳನ್ನು ತೆರೆಯಲು ಅನುಮತಿ ಇಲ್ಲ. ಆದರೆ ಕೆಲವು ಸ್ಟೇಷನರಿ ಅಂಗಡಿಗಳು ದಿನಸಿ ವಸ್ತುಗಳನ್ನು ಸಹ ಮಾರಾಟ ಮಾಡುತ್ತವೆ. ಆದ್ದರಿಂದ ಇಂತಹ ಅಂಗಡಿಗಳು ತೆರೆಯಬಹುದೇ ಎಂಬ ಬಗ್ಗೆ ಸ್ಪಷ್ಟತೆಗಳಿಲ್ಲ. ರಾಜ್ಯ ಸರ್ಕಾರ ಸೋಮವಾರ ಪರಿಷ್ಕೃತ ನಿರ್ದೇಶನಗಳನ್ನು ಹೊರಡಿಸಿದೆ. ಅಂದಿನಿಂದಲೂ ಅಸ್ಪಷ್ಟತೆಗಳಿವೆ ಎಂದು ಸೂಚಿಸಲಾಗಿತ್ತು. ಆದರೆ ಪ್ರಸ್ತಾಪಗಳನ್ನು ಸ್ಪಷ್ಟಪಡಿಸಲು ಸರ್ಕಾರ ಸಿದ್ಧರಿಲ್ಲ.