ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಹರಿತ ಮಿಷನ್ ಸಿ.ಫೆÇೀ.ಯು. ಯೋಜನೆಯ ಅಂಗವಾಗಿ ಬಿದಿರು ಸಸಿಗಳ ನೆಡುವಿಕೆ ಜರುಗಿತು.
ಸಮರ್ಥ ಸಾಮಾಜಿಕ ಭಾಗವಹಿಸುವಿಕೆ ಮೂಲಕ ಬರಗಾಲ ಮತ್ತು ಮರುಭೂಮೀಕರಣ ವಿರುದ್ಧ ಪ್ರತಿರೋಧ ಸಂದೇಶದೊಂದಿಗೆ ವಿಶ್ವಸಂಸ್ಥೆಯ ಕರೆಯಂತೆ ನಡೆಯುವ ಅಂತಾರಾಷ್ಟ್ರೀಯ ದಿನ ಅಂಗವಾಗಿ ಬಿದಿರು ಸಸಿಗಳ ನೆಡುವಿಕೆ ಜರುಗಿತು.
ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರ, ಕಾಞಂಗಾಡು ಬ್ಲೋಕ್ ಪಂಚಾಯತ್, ಮಡಿಕೈ ಗ್ರಾಮ ಪಂಚಾಯತ್, ಎಸ್.ಪಿ.ಸಿ. ಯೂನಿಟ್ ವತಿಯಿಂದ ಮಡಿಕೈ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಕಾರ್ಯಕ್ರಮವಿತ್ತು. ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್.ನಾಥ್ ಉದ್ಘಾಟಿಸಿದರು. ಕಾಞಂಗಾಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಮಡಿಕೈ ಗ್ರಾಮ ಪಂಚಾಯತ್ ಎಸ್.ಪ್ರೀತಾ, ಕಾಞಂಗಾಡು ಬ್ಲೋಕ್ ಪಂಚಾಯತ್ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಕಾಞಂಗಾಡು ಬ್ಲೋಕ್ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಹಮಾನ್, ಬ್ಲೋಕ್ ಅಭಿವೃದ್ಧಿ ಅಧಿಕಾರಿ ಸೋಲಮನ್ ಎಸ್. ಮಡಿಕೈ ಗ್ರಾಮ ಪಂಚಾಯತ್ ಸದಸ್ಯ ಎನ್.ಬಾಲಕೃಷ್ಣನ್, ಜಿಲ್ಲಾ ಪಿಡುಗು ನಿವಾರಣೆ ಹಸಾರ್ಡ್ ಅನಲಿಸ್ಟ್ ಪ್ರೇಂಜಿ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.