ನವದೆಹಲಿ: ಸೈಬರ್ ವಂಚನೆಯಿಂದ ಹಣ ಕಳೆದುಕೊಳ್ಳುವ ಜನರ ನೆರವಿಗಾಗಿ ಸ್ಥಾಪಿಸಿರುವ ಸಹಾಯವಾಣಿಗೆ ಗೃಹ ಸಚಿವ ಅಮಿತ್ ಶಾ ಗುರುವಾರ ಚಾಲನೆ ನೀಡಿದರು.
ಸೈಬರ್ ವಂಚನೆಯಿಂದಾಗಿ ಹಣ ಕಳೆದುಕೊಂಡ ಜನರು ಸಹಾಯವಾಣಿ 155260 ಗೆ ಕರೆ ಮಾಡಿ, ವಂಚನೆ ಕುರಿತು ಮಾಹಿತಿ ನೀಡಬಹುದು. ಅವರಿಗೆ ಹಣ ಮರಳಿಸಲು ಈ ಸಹಾಯವಾಣಿ ನೆರವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಸ್ತುತ ಛತ್ತೀಸಗಡ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಈ ಸಹಾಯವಾಣಿ ಲಭ್ಯ ಇದೆ. ಇತರ ರಾಜ್ಯಗಳಿಗೆ ಶೀಘ್ರವೇ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.