ನವದೆಹಲಿ: 2020ರ ಮೇ ತಿಂಗಳ ಪೂರ್ವ ಲಡಾಕ್ ಸಂಘರ್ಷದ ಬಳಿಕ ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ರಸ್ತೆ ನಿರ್ಮಾಣ ಮತ್ತು ಸೇತುವೆ ನಿರ್ಮಾಣಕ್ಕೆ ಉತ್ತೇಜಿಸಲಾಗಿತ್ತು.
ಅದರಂತೆ ಸಿಕ್ಕಿಂನ ಡೋಕ್ಲಾ ಕಡೆಗಿನ ಪ್ರಮುಖ ಸೇತುವೆಯನ್ನು ಗಡಿ ರಸ್ತೆ ನಿರ್ಮಾಣ ಸಂಸ್ಥೆ(ಬಿಆರ್ ಒ) ಪ್ರಾರಂಭಿಸಿತ್ತು. ಈ ಸೇತುವೆ ಅರುಣಾಚಲ ಪ್ರದೇಶದ ಯಾಂಗ್ಟ್ಸೆಯನ್ನು ರಸ್ತೆಗಳೊಂದಿಗೆ ಜೋಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಿಕ್ಕಿಂನಿಂದ ಡೊಕ್ಲಾ ಕಡೆಗಿನ 140' ಡಬಲ್ ಲೇನ್ ಕ್ಲಾಸ್ -70 ಮಾಡ್ಯುಲರ್ ಸೇತುವೆ ಪೂರ್ಣಗೊಂಡಿದೆ. ಅರುಣಾಚಲ ಪ್ರದೇಶದ ಯಾಂಗ್ಟ್ಸೆಯ ಸ್ಥಳವು ಈಗ ರಸ್ತೆಯೊಂದಿಗೆ ಸಂಪರ್ಕ ಸಾಧಿಸಲಿದೆ ಮೂಲಗಳು ತಿಳಿಸಿವೆ.
ಸಿಕ್ಕಿಂನ ಡೋಕಾ ಲಾ, ಅರುಣಾಚಲದ ಯಾಂಗ್ಟ್ಸೆ ಮತ್ತು ಲಡಾಖ್‌ನ ಡಂಗ್ಟಿ ಇವೆಲ್ಲವೂ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್(ಎಲ್‌ಎಸಿ) ಸಮೀಪದಲ್ಲಿನ ಪ್ರದೇಶಗಳಾಗಿವೆ. ಇವೆಲ್ಲವೂ ಈ ಹಿಂದೆ ಸಂಘರ್ಷ ಮತ್ತು ಚಕಮಕಿಗಳ ಸ್ಥಳಗಳಾಗಿವೆ. ಸಿಕ್ಕಿಂನ ಡೋಕ್ಲಾ ಭಾರತೀಯ ಸೇನೆಯ ಪೋಸ್ಟ್ ಡೋಲಮ್ ಪ್ರಸ್ಥಭೂಮಿಗೆ ಹತ್ತಿರದಲ್ಲಿದೆ. ಅಲ್ಲಿ 2017ರ ಜೂನ್ 16ರಂದು ಚೀನಿಯರು ರಸ್ತೆ ನಿರ್ಮಿಸಲು ಪ್ರಯತ್ನಿಸಿದ್ದರು. ಹೀಗಾಗಿ ಅಲ್ಲಿ ಡೋಕ್ಲಾಮ್ ಸಂಘರ್ಷಕ್ಕೆ ಕಾರಣವಾಗಿತ್ತು.
73 ದಿನಗಳ ನಂತರ ಡೋಕ್ಲಾಮ್ ಸಂಘರ್ಷ ಮುಗಿದಿತ್ತು. ಇನ್ನು ಚೀನಾದ ಸೇನೆಯು ಯಾವುದೇ ಏಕಪಕ್ಷೀಯ ಕ್ರಮ ಕೈಗೊಂಡರೆ ಈ ರಸ್ತೆ ಮೂಲಕ ವೇಗವಾಗಿ ತಲುಪಲು ಸಹಾಯ ಮಾಡುತ್ತದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2018ರ ಜುಲೈನಲ್ಲಿ ಯಾಂಗ್ಟ್ಸೆ ಹೆಚ್ಚಿನ ಸಂಖ್ಯೆಯ ಚೀನೀ ಸೈನಿಕರು ಒಟ್ಟುಗೂಡಿದ್ದರು. ಅಲ್ಲಿ ಸಂಘರ್ಷಕ್ಕೆ ಕಾರಣವಾಗಿತ್ತು. ನಂತರ ಈ ದುರ್ಗಮ ಪ್ರದೇಶದಲ್ಲಿ ವೇಗವಾಗಿ ರಸ್ತೆ ನಿರ್ಮಾಣಕ್ಕೆ ಕಾರಣವಾಯಿತು.
ಯಾಂಗ್ಟ್ಜಿ ಕಡೆಗೆ ನಿರ್ಮಿಸಲಾಗಿರುವ ಹೊಸ ರಸ್ತೆ ವರ್ಷಕ್ಕೆ ಅಂದಾಜು 0.5 ಕಿ.ಮೀನಷ್ಟು ಕಾಮಗಾರಿ ನಡೆಯುತ್ತಿತ್ತು. ಹೀಗಾಗಿ ನಾವು 3 ಹೊಸ ಅಗೆಯುವ ಯಂತ್ರ, 3 ಹೊಸ ಬಲ್ಡೋಜರ್ ಸೇರಿಸಿದ್ದೇವು. ಮಾರ್ಚ್‌ನಿಂದ ಅಕ್ಟೋಬರ್ 2020ರವರೆಗೆ 12 ಕಿ.ಮೀ ರಚನೆ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ. ಚೀನಾದ ನೇರ ವೀಕ್ಷಣೆಯಲ್ಲಿರುವ ಈ ರಸ್ತೆಯನ್ನು ತ್ವರಿತವಾಗಿ ಸಂಪರ್ಕಿಸಿತ್ತದೆ. ಇನ್ನು ಡಂಗ್ಟಿ-ಹೆನಾ ರಸ್ತೆಯೂ ಪೂರ್ಣಗೊಂಡಿದೆ ಎಂದು ತಿಳಿಸಿದರು.