ವಿಶ್ವಸಂಸ್ಥೆ: ಮಯನ್ಮಾರ್ ವಿರುದ್ಧ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಭಾರತ ಹೊರ ನಡೆದಿದೆ. ಕರಡು ನಿರ್ಣಯದಲ್ಲಿ ಭಾರತ ಸರ್ಕಾರದ ನಿಲುವಿಗೆ ಸೂಕ್ತ ಮಾನ್ಯತೆ ನೀಡಿಲ್ಲ ಮತ್ತು ಆ ದೇಶಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಣಯದಲ್ಲಿ ನಂಬಿಕೆ ಇಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.
ಜತೆಗೆ ಅವರು ಮತದಾನದಿಂದ ದೂರ ಉಳಿದಿದ್ದಾರೆ. 119 ನಿರ್ಣಯದ ಪರವಾಗಿ ಮತ ಹಾಕಿದ್ದರೆ, ಭಾರತ, ಮಯನ್ಮಾರ್ ಸೇರಿದಂತೆ 36 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.