ಮಂಜೇಶ್ವರ: ಉದ್ಯಾವರ ಶ್ರೀ ಅರಸು ಮಂಜಿಷ್ಣಾರು ಕ್ಷೇತ್ರದ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ಸದಸ್ಯರ ಸಭೆಯು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಅವರ ಸಮಕ್ಷಮದಲ್ಲಿ ಕ್ಷೇತ್ರದಲ್ಲಿ ಜರಗಿತು.
ಆಡಳಿತ ಮಂಡಳಿಯ ಸದಸ್ಯ ರಘು ಶೆಟ್ಟಿ ಕುಂಜತ್ತೂರು, ಯೋಗೀಶ್ ಕುಂಜತ್ತೂರು, ಕಿರಣ್ ಶೆಟ್ಟಿ ಮಾಡದ ಬಳಿ, ಕರುಣಾಕರ ಶೆಟ್ಟಿ ಬೋಳ್ನಾಡುಗುತ್ತು ಹೊಸಬೆಟ್ಟು, ರವಿ ಕುಮಾರ್ ಕುಂಜತ್ತೂರು ಆಯ್ಕೆಯಾದರು. ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಘು ಶೆಟ್ಟಿ ಕುಂಜತ್ತೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.