HEALTH TIPS

ಬಹುಗುಣರಿಂದ ಯುವ ತಲೆಮಾರು ಕಲಿಯಬೇಕಾದುದು: 'ಕಾಡೆ ನಾಡಿನ ಸಂಪತ್ತು'.... 'ಕಾಡನ್ನು ಉಳಿಸಿ ನಾಡನ್ನು ಬೆಳೆಸಿ'

                                                 

            ಆಹಾ ಇಂತಹ ಅದೆಷ್ಟೋ ಘೋಷಣಾ ವಾಕ್ಯಗಳನ್ನು ಪರಿಸರ ದಿನಾಚರಣೆ ಅಂಗವಾಗಿ ಭಾಷಣ ಮಾಡುವಾಗ ಬಳಸಿ ಕೊಂಡಿದ್ದೇವೆ... ಶಾಲಾ ಜೀವನದಲ್ಲಿ ಅದೆಷ್ಟು ಗಿಡಗಳನ್ನು ನೆಟ್ಟು ವಿಜೃಂಭಿಸಿದ್ದೇವೆ... ಹೀಗೆ  ಪರಿಸರ ದಿನಾಚರಣೆ ಚಟುವಟಿಕೆಗಳಲ್ಲಿ ಭಾಗಿಯಾಗುವಾಗಲೂ   'ಯಾಕಾಗಿ ಪರಿಸರ ಸಂರಕ್ಷಿಸಬೇಕು.?', 'ಪರಿಸರ ನಾಶದಿಂದ  ಎದುರಿಸಬೇಕಾದ ಸಮಸ್ಯೆಗಳು ಯಾವುವು...?' ಇತ್ಯಾದಿ ನಾವೆಂದೂ ಯೋಚಿಸುವುದಿಲ್ಲ. ಇದನ್ನು ತಿಳಿಯದೆ ಚಿಕ್ಕ ಪುಟ್ಟ ತರಗತಿಗಳಿಂದ ಹಿಡಿದು ಉನ್ನತ ಶಿಕ್ಷಣ ಪಡೆದು ಆಧುನಿಕತೆಯ ವಕ್ತಾರರಾಗಿ ಬದಲಾಗುತ್ತೇವೆ.

         ಪರಿಸರ ದಿನದಂದು ಹುಟ್ಟುವ ಪರಿಸರ ಪ್ರೇಮ ನಂತರ ಕಾಣಿಸಿಕೊಳ್ಳುವುದು ಜನುಮದಿನದಂದು ಎಂಬುವುದು ವಿಪರ್ಯಾಸ.

        ನಾವು ಗಿಡನೆಡುವುದನ್ನು ಶಾಲೆಗಳಿಂದ ರೂಢಿಸಿಕೊಂಡಿದ್ದೇವೆಯೇ ಹೊರತು ನೆಟ್ಟ ಗಿಡ-ಮರಗಳನ್ನು  ಸಂರಕ್ಷಿಸುವುದು  ಈ ವರೆಗೂ ರೂಢಿಸಿಕೊಳ್ಳಲಿಲ್ಲ. ಇದರ ಪ್ರತಿಫಲವನ್ನು ನಾವು 21ನೇ ಶತಮಾನದಲ್ಲಿ ಅನುಭವಿಸುತ್ತಿದ್ದೇವೆ. ಅಕಾಲಿಕ ಮಳೆ ಒಂದೆಡೆಯಾದರೆ, ಜಲಪ್ರಳಯ, ಭೂಕುಸಿತ, ಹಿಮ ಪ್ರಳಯ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಕಂಗೆಟ್ಟ ನಮ್ಮ ದೇಶದ ಅಸಹಾಯಕ ಅವಸ್ಥೆಯನ್ನು ನೋಡುತ್ತಿದ್ದೇವೆ. ಕೆಲವು ಪ್ರದೇಶಗಳು ಪ್ರಾಕೃತಿಕ ವಿಕೋಪಕ್ಕೆ ತುತ್ತಾದರೆ, ಮತ್ತು ಕೆಲವು ಪ್ರದೇಶಗಳು ಬರಗಾಳದಿಂದ ತತ್ತರಿಸಿ ಕಪ್ಪೆಗೆ ಕಂಕಣ ಕಟ್ಟುವ ಅನಿವಾರ್ಯತೆಗೆ ಮುಂದಾಗಿರುವುದನ್ನು ಕಾಣಬಹುದು. ಕಪ್ಪೆಗೆ ಮದುವೆ ಮಾಡಿಸುವ ಬದಲು ಜೈವ ಮಂಡಲಕ್ಕೆ ಹೊಂದಿಕೊಂಡು ಬದುಕನ್ನು ಮುನ್ನೆಡೆಸುತ್ತಿದ್ದರೆ ಕಪ್ಪೆಗೆ ಮದುವೆ ಮಾಡಿಸುವ ಸಾಹಸದಿಂದ ದೂರಸರಿಯ ಬಹುದಿತ್ತು. 'ಪ್ರಕೃತಿ ನಮ್ಮೊಂದಿಗೆ ಎನ್ನುವುದನ್ನು ಬಿಟ್ಟು  ಪ್ರಕೃತಿಯೊಂದಿಗೆ ನಾವು '  ಎಂಬ ವಿಚಾರ ಗಮನದಲ್ಲಿಟ್ಟುಕೊಂಡು ಅವೈಜ್ಞಾನಿಕ ಅಭಿವೃದ್ಧಿಯ ಮೂಲಕ ಮನುಷ್ಯ ಸ್ವಾರ್ಥತೆ ಮೆರೆದರೆ; ಪ್ರಕೃತಿ ತಿರುಗೇಟು ನೀಡುವುದರಲ್ಲಿ ಸಂದೇಹವಿಲ್ಲ.

         'ನಾವು ಪ್ರಕೃತಿಗೆ ಹೊಂದಿಕೊಂಡು ಬದುಕಬೇಕೆ ಹೊರತು ಪ್ರಕೃತಿಯನ್ನು ನಮ್ಮ ಗುಲಾಮನಾಗಿಸಬಾರದು' ಎಂಬುದನ್ನು ತನ್ನ ನಡೆಯ ಮೂಲಕ ತೋರಿಸಿ ಕೊಟ್ಟವರು ಇತ್ತೀಚೆಗೆ ಕೊರೊನ ಮಹಾಮಾರಿಗೆ ಬಲಿಯಾದ ಸುಂದರ್ ಲಾಲ್ ಬಹುಗುಣರು.ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹಗಳ ಮೂಲಕ ಪರಿಸರ ಸಂರಕ್ಷಣೆಗೆ  ಇಳಿದ ಧೀರ. ಹಿಮಾಲಯದ ಮಡಿಲಲ್ಲಿ ಬೆಳೆದ ಬಹುಗುಣರು ಪರಿಸರ ಸಂರಕ್ಷಣೆಯನ್ನು ತನ್ನ ಹವ್ಯಾಸವನ್ನಾಗಿಸಿದ ಮಹಾನ್ ವ್ಯಕ್ತಿ. 1927 ಜನವರಿ 9ರಂದು ಜನಿಸಿದ ಈ ಪರಿಸರವಾದಿ ತನ್ನ ಹದಿಮೂರನೇ ವಯಸ್ಸಿನಲ್ಲಿ ಶ್ರೀದೇವ್ ಸುಮನ್ ರವರ ಮಾರ್ಗದರ್ಶನದೊಂದಿಗೆ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. 'ಗಾಂಧಿ ತತ್ವ'ದ ಹಿರಿಮೆಯನ್ನು ಅರಿತ ಬಹುಗುಣರು ಪರಿಸರ ಸಂರಕ್ಷಣೆಯಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡರು.

           ಹಿಮಾಲಯದ ಕಾಡು-ಮೇಡು ಗಳಲ್ಲಿ ಅಲೆದು; ಹಿಮಾಲಯದ ಹೃದಯ ಬಡಿತವನ್ನು  ತಿಳಿದವರು. ಅವೈಜ್ಞಾನಿಕ ಅಭಿವೃದ್ಧಿಯನ್ನು ಕಟುವಾಗಿ ಎದುರಿಸಿದರಲ್ಲದೆ; 'ಸುಸ್ಥಿರ ಅಭಿವೃದ್ಧಿ'ಗಾಗಿ ಪಟ್ಟು ಹಿಡಿದರು.ಅಭಿವೃದ್ಧಿಯ ನೆಪದಲ್ಲಿ ಅರಣ್ಯ ನಾಶ ಮಾಡುವ ಸರಕಾರದ ಧೋರಣೆ ಯ ವಿರುದ್ಧ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಮರ ಕಡಿಯುವುದರ ಬಗ್ಗೆ ಅಸಹಕಾರ ತೋರಿಸಿದ 'ಚಿಪೆÇ್ಕೀ ಆಂದೋಲನ'ದ ನಾಯಕರಾಗಿದ್ದರು. 1974 ಮಾರ್ಚ್ ತಿಂಗಳಲ್ಲಿ ನಡೆದ  ಚಿಪೆÇ್ಕೀ ಆಂದೋಲನಕ್ಕೆ  'ಆಂಟಿ ನಿಲ್ಲು' ಎಂಬ ದೊಡ್ಡ ಮಾನದ ಅರ್ಥ ಇದೆ. ಉತ್ತರ ಖಂಡ ರಾಜ್ಯದ ಗರ್ವಾಲಹಿಮಾಲಯ ದ ಸ್ತ್ರೀಯರನ್ನೂ, ಗೋತ್ರ ಸಮಜವನ್ನೂ, ಹಿಂದುಳಿದ ಜನಾಂಗದವರನ್ನು ಒಂದುಗೂಡಿಸಿಕೊಂಡು  ಹೋರಾಟ ನಡೆದದ್ದು ಈಗ ಇತಿಹಾಸ. ಬಹುಗುಣರ ಈ ನಡೆಯು ಮುಂದೆ ವಿಂಧ್ಯಾ, ಪಶ್ಚಿಮ ಘಟ್ಟದ ಸಂರಕ್ಷಣೆಗೂ ಪ್ರಚೋದನೆಯಾಯಿತು. ತಹ್ರಿ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿಯೂ ಆಂದೋಲನ ನಡೆಸಿದ ಇವರು ತನ್ನ ಜೀವನದ ಸಿಂಹಪಾಲು ಪರಿಸರ ಸಂರಕ್ಷಣೆಗಾಗಿಯೇ ಮುಡಿಪಾಗಿಟ್ಟವರು.

        ಈಗಿನ ತಲೆಮಾರು ಸುಂದರ್ ಲಾಲರ 'ಬಹುಗುಣ'ಗಳನ್ನು ಅಳವಡಿಸಬೇಕಾದ ಸಮಯ ಸಮೀಪಿಸಿದೆ. 1981ರಲ್ಲಿ ಲಭಿಸಿದ ಪದ್ಮಶ್ರೀ ಹಾಗೂ 2009ರಲ್ಲಿ  ಲಭಿಸಿದ ಪದ್ಮವಿಭೂಷಣ್ ಪ್ರಶಸ್ತಿಗಳು ಬಹುಗುಣರ ಪರಿಸರ ಪ್ರೇಮಕ್ಕೆ ಲಭಿಸಿದ ಅಂಗೀಕಾರವಾಗಿದೆ. 'ಪರಿಸರವು ಶಾಶ್ವತ ಆರ್ಥಿಕತೆ' ಎಂಬ ಆಶಯ ಒಳಗೊಂಡ 'ಬಹುಗುಣ ತತ್ವ'ವನ್ನು ಎಲ್ಲೆಡೆಯೂ ಪಸರಿಸಿಕೊಂಡು; ಸುಸ್ಥಿರ ಅಭಿವೃದ್ಧಿಯನ್ನು  ಕಾಪಾಡುವುದು  ಜೈವ ಮಂಡಲದ ಅಸ್ತಿತ್ವಕ್ಕೆ ಅನಿವಾರ್ಯವಾಗಿದೆ.

ಬರಹ: ರಾಜೇಶ್ ಸಾಮೆಕೊಚ್ಚಿ

ಮೊ: 9539390469



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries