ಕೋಝಿಕ್ಕೋಡ್: ರಾಮನಾಟ್ಟುಕ್ಕರ ಚಿನ್ನ ಕಳ್ಳಸಾಗಣೆಯಲ್ಲಿ ಸಿಪಿಎಂ ಪಾತ್ರ ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಹಣವನ್ನು ಸಹಕಾರಿ ಬ್ಯಾಂಕ್ ಮೂಲಕ ಕಳ್ಳಸಾಗಣೆ ಮಾಡಲಾಗಿದೆ. ಕಳ್ಳಸಾಗಣೆಗೆ ಬಳಸಿದ ಕಾರು ಸಿಪಿಎಂ ನಾಯಕನಿಗೆ ಸೇರಿದೆ. ಅವರು ಪ್ರಮುಖ ಸಹಕಾರ ಸಂಘದ ಉದ್ಯೋಗಿ. ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಶಾಜೀರ್ ಇಸ್ಲಾಮಿಕ್ ಬ್ಯಾಂಕ್ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ಅರ್ಜುನ್ ಅವರೊಂದಿಗೆ ಉತ್ತಮ ಸಂಬಂಧವನ್ನೂ ಹೊಂದಿದ್ದಾನೆ ಎಂದು ಸುರೇಂದ್ರನ್ ಆರೋಪಿಸಿರುವರು.
ರಾಮನಾಟ್ಟುಕ್ಕರ ಘಟನೆಯ ಹಿಂದೆ ಸಿಪಿಎಂ ನೇತೃತ್ವದ ಕಳ್ಳಸಾಗಣೆ ಜಾಲವಿದೆ ಎಂದು ಈ ಹಿಂದೆ ಬಿಜೆಪಿ ಹೇಳಿತ್ತು. ಸಿಪಿಎಂ ಗೂಂಡಾಗಳು ಮತ್ತು ಸೈಬರ್ ತಂಡ ಇದರ ಹಿಂದೆ ಇರುವುದರಿಂದ ತನಿಖೆ ಪ್ರಗತಿ ಕಂಡಿಲ್ಲ. ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣ ಸಿಪಿಎಂ ನತ್ತ ವಾಲುತ್ತಿದೆ ಎಂದು ಅರ್ಥವಿಸಿಯೇ ಅವರನ್ನು ವಜಾಗೊಳಿಸಿರುವುದಾಗಿ ಹೇಳಿಕೆ ನೀಡಿದರು. ಮುಖ್ಯಮಂತ್ರಿ ಸೇರಿದಂತೆ ಸಿಪಿಎಂ ಮುಖಂಡರೊಂದಿಗೆ ಫೆÇೀಟೋ ತೆಗೆದುಕೊಂಡಿರುವ ಆರೋಪಿಗಳ ನೈಜತೆ ಬಯಲಾಗಿದೆ. ತಿರುವನಂತಪುರ ಅಂತರರಾಷ್ಟ್ರೀಯ ಕಳ್ಳಸಾಗಣೆಯಂತೆ, ಮಲಬಾರ್ ಪ್ರದೇಶದಲ್ಲಿ ಚಿನ್ನ ಕಳ್ಳಸಾಗಣೆಯ ಹಿಂದೆ ಸಿಪಿಎಂ ಕೂಡ ಇದೆ. ಅಪರಾಧದ ತನಿಖೆ ಸಿಪಿಎಂನತ್ತ ಮುಖಮಾಡಿದಾಗ, ಅಪರಾಧ ಉಲ್ಲೇಖಿಸುವ ಗುಂಪನ್ನು ದೂಷಿಸುವ ಮೂಲಕ ಪಕ್ಷ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಸಿಪಿಎಂ ಕಳ್ಳಸಾಗಣೆಯ ಆಂದೋಲನ ನಡೆಸುತ್ತಿದೆ ಎಂದು ಸುರೇಂದ್ರನ್ ಆರೋಪಿಸಿದರು.
5 ವರ್ಷಗಳಲ್ಲಿ ಕೇರಳದಲ್ಲಿ ಎಷ್ಟು ಮಹಿಳೆಯರು ಸಂಕಷ್ಟಕ್ಕೊಳಗಾಗಿದ್ದಾರೆ? ಮಹಿಳಾ ಆಯೋಗದ ಅಧ್ಯಕ್ಷರು ಸ್ವತಃ ಆರೋಪಗಳನ್ನು ಬಹಿರಂಗವಾಗಿ ನಿರಾಕರಿಸಿದ್ದಾರೆ. ಮಹಿಳಾ ಆಯೋಗದಲ್ಲಿ ಕುಳಿತು ದುಷ್ಕರ್ಮಿಗಳ ಪರವಾಗಿ ಮಾತನಾಡುವಾಗ ಜೋಸೆಫೀನ್ ಅವರನ್ನು ಸಿಪಿಎಂ ಕೇಂದ್ರ ಸಮಿತಿಯಿಂದ ಏಕೆ ತೆಗೆದುಹಾಕಲಿಲ್ಲ? ಮರದ ಕೊರಡುಗಳ ಅಕ್ರಮ ಮಾರಾಟದ ಹಿಂದೆ ಸಿಪಿಎಂ ನಿಶ್ಚಯವಾಗಿ ಇದೆ. ಮಹಿಳೆಯರ ಕಳ್ಳಸಾಗಣೆ, ಲಾಗಿಂಗ್ ಮತ್ತು ಕಿರುಕುಳ ಎಲ್ಲವೂ ಸರ್ಕಾರದ ನೆರಳಿನಲ್ಲಿ ನಡೆಯುತ್ತವೆ. ಈ ಎಲ್ಲ ಪ್ರಕರಣಗಳನ್ನು ವಿಶೇಷ ತನಿಖಾ ತಂಡ ತನಿಖೆ ಮಾಡಬೇಕು. ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಪೋಲೀಸರು ಕಸ್ಟಮ್ಸ್ಗೆ ಸಹಕರಿಸುತ್ತಿಲ್ಲ ಎಂದು ಕೆ ಸುರೇಂದ್ರನ್ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ವಿ.ಕೆ.ಸಜೀವನ್, ರಾಜ್ಯ ಕಾರ್ಯದರ್ಶಿ ಪಿ.ರಘುನಾಥ್ ಉಪಸ್ಥಿತರಿದ್ದರು.