ಬ್ರಿಟನ್: ಜಗತ್ತಿನಲ್ಲಿ ಸಂಭವಿಸಬಹುದಾದ ಕೆಲವೊಂದು ವಿಷಯಗಳ ಬಗ್ಗೆ ಭವಿಷ್ಯವಾಣಿ ನುಡಿಯುವವರು ಹಲವರಿದ್ದಾರೆ. ಆದರೆ ಆ ಪೈಕಿ ಕೆಲವರು ನುಡಿದಿರುವ ಭವಿಷ್ಯಗಳು ಬಹುತೇಕ ನಿಜವಾಗಿದ್ದು ಇವೆ. ಸಹಸ್ರಾರು ವರ್ಷಗಳ ಹಿಂದೆಯೇ ಬಲ್ಗೇರಿಯಾದ ಬಾಬಾ ವಾಂಗಾ ನುಡಿದಿರುವ ಭವಿಷ್ಯಗಳು ಹಲವಾರು ನಿಜವಾಗಿರು ಈ ಹೊತ್ತಿನಲ್ಲಿ ಅದೇ ರೀತಿ ಬ್ರಿಟನ್‌ನ ರೊಕ್ಸಾನೆ ಫರ್ನಿವಾಲ್ ಎಂಬಾಕೆ ಅನೇಕ ಘಟನೆಗಳ ಕುರಿತು ಭವಿಷ್ಯಗಳನ್ನು ನುಡಿದಿದ್ದು, ಇವುಗಳ ಪೈಕಿ ಹಲವು ಸತ್ಯವಾಗಿವೆ ಎನ್ನಲಾಗಿದೆ.
ಕೋವಿಡ್ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸುವ ಬಗ್ಗೆ ಕೂಡ ಎರಡು ವರ್ಷಗಳ ಹಿಂದೆಯೇ ಈಕೆ ಭವಿಷ್ಯ ನುಡಿದಿದ್ದಳಂತೆ. ರೊಕ್ಸಾನೆ ಈಗಲೂ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾಳೆ. ಅದೇನೆಂದರೆ ಕೋವಿಡ್ ಇಲ್ಲಿಗೇ ನಿಲ್ಲುವುದಿಲ್ಲ. ವರ್ಷಾಂತ್ಯಕ್ಕೆ ಇದು ಮತ್ತಷ್ಟು ಕಾಡಲಿದೆ. ಮುಂಬರುವ ವರ್ಷಗಳಲ್ಲಿ ಕೋವಿಡ್‌ನ ಅಲೆ ಅಪ್ಪಳಿಸಲಿದ್ದು, ಮತ್ತೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ ಎಂದಿರುವ ರೊಕ್ಸಾನೆ ಯಾವುದೇ ಕಾರಣಕ್ಕೂ 2022 ಮತ್ತು 2033ರಂದು ಹೊರಗಡೆ ಪ್ರವಾಸಕ್ಕೆ ಹೋಗುವ ಬುಕ್ಕಿಂಗ್ ಮಾಡಿಡಬೇಡಿ ಎಂದಿದ್ದಾರೆ. ಇದರ ಅರ್ಥ ಈ ಎರಡು ವರ್ಷ ಮಹಾಮಾರಿ ಜಗತ್ತನ್ನು ಮತ್ತಷ್ಟು ಕಾಡಲಿದೆ ಎಂಬ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.
ಇದರ ಜತೆಗೇನೆ ಶೀತಲ ಸಮರವೂ ಮನುಕುಲದ ಮೇಲೆ ಭಾರಿ ಆಘಾತವನ್ನು ಉಂಟುಮಾಡಲಿದೆ. ಜಾಗತಿಕ ರಾಜಕಾರಣ ಕುಲಗೆಟ್ಟು ವಿಶ್ವಮಹಾಯುದ್ಧದ ಸಾಧ್ಯತೆಯೂ ಇದೆ. ಬ್ರಿಟನ್‌ನಲ್ಲಿ ಕೆಟ್ಟ ಹವಾಮಾನ ಹಾಗೂ ಪ್ರವಾಹಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ.
ಯುವರಾಜ ಹ್ಯಾರಿ ಹಾಗೂ ಮೆಘನ್ ಮಾರ್ಕೆಲ್ ಅವರಿಗೆ ಮತ್ತೊಂದು ಮಗುವಾಗಲಿದೆ ಎಂದಿರುವ ಈಕೆ, ಯುವರಾಜ ವಿಲಿಯಂ ಪಟ್ಟಾಭಿಷೇಕವಾಗಲಿದ್ದು, ಬೋರಿಸ್ ಜಾನ್ಸನ್ ಮುಂದಿನ ಚುನಾವಣೆ ಗೆಲ್ಲಲಿದ್ದಾರೆ ಎಂದಿದ್ದಾರೆ.
ಇವರು ಈ ಹಿಂದೆ ಲಂಡನ್‌ನಲ್ಲಿ ನಡೆಯಲಿರುವ ಭಾರಿ ಪ್ರತಿಭಟನೆ ಮತ್ತು ಜಸ್ಟಿನ್ ಟ್ರುಡೊ ಅವರ 'ಬ್ರೌನ್‌ಫೇಸ್' ಹಗರಣದ ಕುರಿತು ಭವಿಷ್ಯ ನುಡಿದಿದ್ದರು. ಇದು ನಿಜವಾಗಿದೆ.