ನವದೆಹಲಿ: ಸರ್ಕಾರದ ಕೋವಿನ್ ಪೋರ್ಟಲ್ ನಲ್ಲಿ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರಗಳನ್ನು ಪಾಸ್ ಪೋರ್ಟ್ ಜೊತೆ ಸಂಪರ್ಕಿಸಿ ಪ್ರಯಾಣ ಮಾಡಬಹುದು. ಪಾರ್ಸ್ ಪೋರ್ಟ್ ಸಂಖ್ಯೆಯನ್ನು ಲಸಿಕೆ ಪ್ರಮಾಣಪತ್ರದ ಜೊತೆಗೆ ಅಪ್ ಡೇಟ್ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸೇತು ಆಪ್ ಟ್ವೀಟ್ ಮಾಡಿದೆ.
ಲಸಿಕೆ ಪ್ರಮಾಣಪತ್ರ ಮತ್ತು ಪಾಸ್‌ಪೋರ್ಟ್‌ನಲ್ಲಿರುವ ಹೆಸರು ಒಂದೇ ಎಂದು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್ ನಲ್ಲಿ ಒಂದು ಬಾರಿ ಹೆಸರು ಬದಲಾವಣೆಗೆ ಅವಕಾಶ ನೀಡುತ್ತದೆ. ಈ ತಿಂಗಳ ಆರಂಭದಲ್ಲಿ, ಕೋವಿಡ್ -19 ಲಸಿಕೆಗಾಗಿ ಕೇಂದ್ರವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು, ಶಿಕ್ಷಣ, ಉದ್ಯೋಗಗಳಿಗಾಗಿ ವಿದೇಶಕ್ಕೆ ಪ್ರಯಾಣಿಸುವವರು ಅಥವಾ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಭಾರತೀಯ ತಂಡದ ಭಾಗವಾಗಿರುವವರು, ಅವರ ಲಸಿಕೆ ಪ್ರಮಾಣಪತ್ರಗಳನ್ನು ಪಾಸ್‌ಪೋರ್ಟ್‌ಗಳೊಂದಿಗೆ ಲಿಂಕ್ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.
ಸಂಪರ್ಕದ ಪತ್ತೆ ಮತ್ತು ಲಸಿಕೆ ನಿರ್ವಹಣೆಯಲ್ಲಿ ಮುಕ್ತ ಮೂಲ ಡಿಜಿಟಲ್ ಪರಿಕರಗಳ ಬಳಕೆಯಲ್ಲಿ ಭಾರತದ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಪಾಲುದಾರ ರಾಷ್ಟ್ರಗಳೊಂದಿಗೆ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಿದೆ.
ಕೋವಿನ್ ಆಯಪ್‌ನ ವಿವರಗಳನ್ನು ಹಂಚಿಕೊಳ್ಳಲು ಪಾಲುದಾರ ರಾಷ್ಟ್ರಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಪ್ರಸ್ತಾಪಿಸಿದೆ. ವಿವರಗಳನ್ನು ದೃಢಪಡಿಸಿದ ನಂತರ ನಾವು ನವೀಕರಣಗಳನ್ನು ಒದಗಿಸುತ್ತೇವೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.