ಮುಂಬೈ: ಚಿನ್ನದ ಆಭರಣಗಳು ಮತ್ತು ಇತರ ಚಿನ್ನದ ವಸ್ತುಗಳ ಮೇಲೆ ಹಾಲ್ ಮಾರ್ಕ್ ನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಆಭರಣಗಳನ್ನು ಖರೀದಿಸುವಾಗ ಹಾಲ್ ಮಾರ್ಕ್ ಇದ್ದರೆ ಅದರ ಮೇಲೆ ನಮ್ಮ ನಂಬಿಕೆ, ವಿಶ್ವಾಸ ಹೆಚ್ಚಾಗುತ್ತದೆ. ಹಾಲ್ ಮಾರ್ಕ್ ಇರುವ ಚಿನ್ನ ಶುದ್ಧವಾಗಿದ್ದು ಭಾರತದ ಎಲ್ಲಿಯಾದರೂ ನೀವು ಖರೀದಿಸಬಹುದು ಎಂದು ಹೇಳುತ್ತದೆ ಎಂದು ಮುಂಬೈ ಜ್ಯುವೆಲ್ಲರಿ ಮಳಿಗೆಯಲ್ಲಿ ಖರೀದಿದಾರರೊಬ್ಬರು ಹೇಳುತ್ತಾರೆ.
ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಭಾರತದ ಚಿನ್ನ ಮತ್ತು ಜ್ಯುವೆಲ್ಲರಿ ಒಕ್ಕೂಟದ ಮುಂಬೈ ಶಾಖೆಯ ಮುಖ್ಯಸ್ಥ, ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಹಾಲ್ ಮಾರ್ಕ್ ಇರುವ ಚಿನ್ನವನ್ನು ಮಾರಾಟ ಮಾಡಿದರೆ ನಮ್ಮ ಮೇಲೆ ಜನರ ವಿಶ್ವಾಸ ಹೆಚ್ಚಿದರೂ ಕೂಡ ಹಾಲ್ ಮಾರ್ಕ್ ಇಲ್ಲದಿರುವ ಜ್ಯುವೆಲ್ಲರಿಗಳನ್ನು ಮಾರಾಟ ಮಾಡಲು ಸರ್ಕಾರ ನಮಗೆ ಹೆಚ್ಚು ಸಮಯ ಕೊಡಬೇಕು ಎಂದರು.
ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಸ್ ನ ಡಿಜಿ ಪ್ರಮೋದ್ ಕುಮಾರ್ ತಿವಾರಿ, ಹಾಲ್ ಮಾರ್ಕ್ ಇಲ್ಲದಿರುವ ಆಭರಣಗಳನ್ನು ಜ್ಯುವೆಲ್ಲರಿ ಅಂಗಡಿಗಳು ಮತ್ತು ಮಳಿಗೆಗಳಲ್ಲಿ ಮಾರಾಟ ಮಾಡಲು ಇನ್ನೂ ಅವಕಾಶ ಇದ್ದು, ಖರೀದಿಸಿದವರು ಅದಕ್ಕೆ ಹಾಲ್ ಮಾರ್ಕ್ ಹಾಕಿ ಹೊಸ ಜ್ಯುವೆಲ್ಲರಿಯಾಗಿ ಮಾಡಿ ಗುಣಮಟ್ಟ ಕಾಪಾಡಿಕೊಳ್ಳಬೇಕಾಗುತ್ತದೆ ಎಂದರು.