ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಆರಾಧನಾಲಯಗಳÀನ್ನು ತೆರೆಯುವ ನಿರ್ಧಾರಕ್ಕೆ ಬರಲಾಗಿದೆ. ಆದರೆ ಪರೀಕ್ಷಾ ಸಕಾರಾತ್ಮಕ ದರದ ಶೇಕಡಾ 16 ರೊಳಗಿನ ಗ್ರಾ.ಪಂ./ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಗಳಲ್ಲಿ ಮಾತ್ರ ಆರಾಧನಾಲಯಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಏಕಕಾಲದಲ್ಲಿ ಗರಿಷ್ಠ ಹದಿನೈದು ಜನರಿಗೆ ಒಳಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ.
ಪ್ರತಿಪಕ್ಷಗಳು ಮತ್ತು ಧಾರ್ಮಿಕ ಸಂ||ಘಟನೆಗಳು ಆರಾಧನಾಲಯಗಳನ್ನು ಪುನಃ ತೆರೆಯುವಂತೆ ಒತ್ತಾಯಿಸುತ್ತಿರುವುದುರ ಮಧ್ಯೆ ಈ ವಿನಾಯಿತಿ ನೀಡಲಾಗಿದೆ. ಇಂದು ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಾಮಾನ್ಯ ನಿರ್ಬಂಧಗಳನ್ನು ಒಂದು ವಾರಕ್ಕೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಪರೀಕ್ಷಾ ಸಕಾರಾತ್ಮಕತೆ ಹೆಚ್ಚಿರುವಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಮುಂದುವರಿಯುತ್ತದೆ. ಟಿಪಿಆರ್ 24 ಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಮುಂದುವರೆಸುವ ನಿರ್ಧಾರ ತಳೆಯಲಾಗಿದೆ.
ಪರೀಕ್ಷಾ ಸಕಾರಾತ್ಮಕತೆಯ ಆಧಾರದ ಮೇಲೆ ನಿಯಂತ್ರಣವನ್ನು ನಾಲ್ಕು ವಲಯಗಳಾಗಿ ವಿಂಗಡಿಸಲಾಗುವುದು. ನಿರ್ಬಂಧಗಳನ್ನು ಶೂನ್ಯದಿಂದ ಎಂಟು ಪ್ರತಿಶತ ಎ ವರ್ಗ, ಎಂಟು ರಿಂದ 16 ಪ್ರತಿಶತ ಬಿ ವರ್ಗ, 16 ರಿಂದ 24 ಪ್ರತಿಶತ ಸಿ ವರ್ಗ ಮತ್ತು 24 ರಿಂದ ಮೇಲಿನ ವರ್ಗ ಡಿ ಎಂಬಂತೆ ವರ್ಗೀಕರಿಸಲಾಗಿದೆ.