ತಿರುವನಂತಪುರ: ಕೊರೋನಾ ಮಹಾಮಾರಿಯಿಂದ ರಕ್ಷಣೆಗೆ ಕೇರಳಕ್ಕೆ ಸಹಾಯ ಮಾಡಲು ಅದಾನಿ ಗ್ರೂಪ್ ಮುಂದಾಗಿದೆ. ಆಮ್ಲಜನಕದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆಮ್ಲಜನಕ ಸಿಲಿಂಡರ್ ಗಳನ್ನು ಒದಗಿಸಿದೆ. ಮೂರು ಆಮ್ಲಜನಕ ಸಿಲಿಂಡರ್ ಗಳನ್ನು ರಾಜ್ಯಕ್ಕೆ ಹಸ್ತಾಂತರಿಸಲಾಯಿತು.
ಇವು ಸಿಂಗಾಪುರದಿಂದ ತರಿಸಲಾದ ಸಿಲಿಂಡರ್ ಗಳಾಗಿವೆ. ಕಂಟೇನರ್‍ಗಳನ್ನು ವಿಶೇಷ ವಾಯುಪಡೆಯ ವಿಮಾನದಲ್ಲಿ ತರಿಸಲಾಗಿದ್ದು, ಎರ್ನಾಕುಳಂ ಜಿಲ್ಲಾಡಳಿತ ಸ್ವೀಕರಿಸಿದೆ. ಸಿಂಗಾಪುರದಿಂದ 20 ಟನ್ ಆಮ್ಲಜನಕ ಸಾಮಥ್ರ್ಯ ಹೊಂದಿರುವ ಕಂಟೇನರ್‍ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನು ರಾಜ್ಯದ ವಿವಿಧ ಪ್ರದೇಶಗಳಿಗೆ ನೀಡಲಾಗುವುದು.
ಈ ಹಿಂದೆ ಅದಾನಿ ಗ್ರೂಪ್ ಕೊರೋನಾ ತಡೆಗಟ್ಟುವ ಚಟುವಟಿಕೆಗಳಿಗಾಗಿ ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ 5 ಕೋಟಿ ರೂ. ನೆರವು ನೀಡಿತ್ತು. ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು 1012 ಆಮ್ಲಜನಕ ಸಿಲಿಂಡರ್‍ಗಳು ಮತ್ತು ಹಾಸಿಗೆಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ವಿತರಿಸಿತ್ತು. ಅಲ್ಲದೆ, ಆಮ್ಲಜನಕ ಸಿಲಿಂಡರ್ ಗಳನ್ನೂ ಇದೀಗ ಒದಗಿಸಿದೆ.