ಕಾಸರಗೋಡು: ಕೇರಳ ಶುಚಿತ್ವ ಮಿಶನ್ ವತಿಯಿಂದ ಕಾರ್ಯಾಚರಿಸುವ ಹಸಿರು ಕ್ರಿಯಾಸೇನೆ ಚೆಂಗಳ ಪಂಚಾಯಿತಿಯಲ್ಲಿ ಚಟುವಟಿಕೆ ಆರಂಭಿಸಿದೆ. ಹಸಿರು ಕ್ರಿಯಾಸೇನೆ ರಚಿಸುವ ಮೂಲಕ ಕುಟುಂಬಶ್ರೀ ಸದಸ್ಯರು ಶುಚಿತ್ವ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ಸಂದರ್ಭ ಹಸಿರು ಕ್ರಿಯಾಸೇನೆಯಲ್ಲಿ ಚಟುವಟಿಕೆ ನಡೆಸುವವರಿಗಾಗಿ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಬಗ್ಗೆ ತರಗತಿ ನಡೆಸಲಾಯಿತು. ಈ ಸಂದರ್ಭ ಹಸಿರುಕ್ರಿಯಾ ಸೇನೆ ಸದಸ್ಯರಿಗೆ ಸಮವಸ್ತ್ರ ವಿತರಿಸುವ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ ಕ್ರಿಯಾ ಸೇನೆಗೆ ಚಾಲನೆ ನೀಡಿದರು. ಜಿಲ್ಲಾ ಶುಚಿತ್ವ ಮಿಶನ್ ಸಹಾಯಕ ಕೋರ್ಡಿನೇಟರ್ ಕೆ.ಪಿ ಪ್ರೇಮರಾಜನ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ. ಸುರೇಂದ್ರನ್, ಜಿ.ರಾಮಚಂದ್ರನ್, ವಿ.ಇ.ಓ ಸುಜಿತ್‍ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಗ್ರಾಮ ಪಂಚಾಯಿತಿಯ ಎಲ್ಲ ವಾರ್ಡು ಸದಸ್ಯರ ನೇತೃತ್ವದಲ್ಲಿ ಆಯಾ ವಾರ್ಡುಗಳ ಮನೆಗಳಿಗೆ ತೆರಳಿ ತ್ಯಾಜ್ಯ ವಿಲೇವಾರಿ ಬಗ್ಗೆ ಜನರಿಗೆ ಬೋಧನೆ ನೀಡಲು ಹಾಗೂ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲೂ ತೀರ್ಮಾನಿಸಲಾಯಿತು.