ತಿರುವನಂತಪುರ: ವರದಕ್ಷಿಣೆ ಪಿಡುಗು ತಡೆಗಟ್ಟಲು ಸಮಾಜವು ತನ್ನನ್ನು ತಾನೇ ಸರಿಪಡಿಸಿಕೊಳ್ಳಬೇಕು ಎಂದು ಡಿಜಿಪಿ ಲೋಕಸನಾಥ ಬೆಹ್ರಾ ಹೇಳಿರುವರು. ಡಿಜಿಪಿ ಲೋಕಸನಾಥ ಬೆಹ್ರಾ ಮಾತನಾಡಿ, ಮಹಿಳೆಯರುದೌರ್ಜನ್ಯಗಳನ್ನು ಸಹಿಸಬಾರದು.ಸೆಟೆದೇಳಬೇಕು ಎಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಿಜಿಪಿಯ ಪ್ರತಿಕ್ರಿಯೆ ನೀಡಿದ್ದಾರೆ.
ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯವನ್ನು ಎದುರಿಸುತ್ತಿರುವ ಮಹಿಳೆಯರು ಕರೆ ಮಾಡಿದರೆ ಪೋಲೀಸರು ತನಿಖೆ ನಡೆಸುತ್ತಾರೆ ಎಂದು ಡಿಜಿಪಿ ಹೇಳಿದ್ದಾರೆ. ವಿಸ್ಮಯ ಪ್ರಕರಣದಂತಹ ಘಟನೆಗಳನ್ನು ಅಧ್ಯಯನ ಮಾಡಬೇಕಾಗಿದೆ. ಅಂತಹ ಪ್ರಕರಣಗಳಲ್ಲಿ ಮಹಿಳೆಯರು ದೂರುಗಳೊಂದಿಗೆ ಮುಂದೆ ಬರುವುದು ಉತ್ತಮ ಪ್ರವೃತ್ತಿಯಾಗಿದೆ ಮತ್ತು ಮಹಿಳೆಯರು ಸ|ಂಕಷ್ಟಗಳನ್ನು ಅವಡುಗಚ್ಚಿ ಸಹಿಸುವುದು ಹಿತವಲ್ಲ ಎಂದು ಡಿಜಿಪಿ ಹೇಳಿದರು. ಡಿಜಿಪಿ ಈ ತಿಂಗಳ 30 ರಂದು ನಿವೃತ್ತಿಯಾಗುವ ಹಿನ್ನೆಲೆಯಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು. ಹೊಸತಾಗಿ ನಿಯುಕ್ತರಾಗುವ ಡಿಜಿಪಿಗೆ ದೊಡ್ಡ ಸವಾಲು ಎಂದರೆ ರಾಜ್ಯದಲ್ಲಿ ಪೋಲೀಸ್ ಬಲವನ್ನು ಮುಂಚೂಣಿಯಲ್ಲಿಡುವುದು ದೊಡ್ಡ ಸವಾಲು ಎಂದು ಅವರು ಈ ಸಂದರ್ಭ ತಿಳಿಸಿದರು.
ವರದಕ್ಷಿಣೆ ಕಿರುಕುಳ ಮತ್ತು ಮಹಿಳಾ ಆತ್ಮಹತ್ಯೆಗಳು ರಾಜ್ಯವನ್ನು ಪೀಡಿಸುತ್ತಿರುವ ಸಂದರ್ಭ ಡಿಜಿಪಿಯ ಪ್ರತಿಕ್ರಿಯೆ ಮಹತ್ವದ್ದಾಗಿದೆ. ಕೊಲ್ಲಂ ಸಮೀಪ ವರದಕ್ಷಿಣೆ ಕಿರುಕುಳ ಕಾರಣ ಆಯುರ್ವೇದ ಪದವೀಧರೆಯಾದ ವಿದ್ಯಾರ್ಥಿನಿ ವಿಸ್ಮಯ (24) ಸಾವನ್ನಪ್ಪಿದ ಬಳಿಕ ರಾಜ್ಯ ಸರ್ಕಾರ ಕಠಿಣ ಕ್ರಮ ಘೋಷಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪೋಲೀಸರು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಮತ್ತು ಶೀಘ್ರ ಶಿಕ್ಷೆ ವಿಧಿಸಬೇಕು ಎಂದು ಮುಖ್ಯಮಂತ್ರಿ ನಿನ್ನೆ ಹೇಳಿದ್ದರು.
ಮಾವೋವಾದಿಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಬೆಹ್ರಾ ಹೇಳಿದ್ದಾರೆ. ಮಾವೋವಾದಿಗಳ ಮೇಲೆ ಗುಂಡು ಹಾರಿಸಿರುವ ಬಗ್ಗೆ ಮತ್ತು ಅವರ ವಿರುದ್ಧ ಯುಎಪಿಎ ಆರೋಪಿಸಿರುವ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದರು. ಮುಂದಿನ ಡಿಜಿಪಿ ಯಾರು ಎಂದು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.