ನವದೆಹಲಿ: ಕೆ ಸುಧಾಕರನ್ ಅವರನ್ನು ಕೇರಳದ ಹೊಸ ಕೆಪಿಸಿಸಿ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಈ ಬಗ್ಗೆ ಹೈಕಮಾಂಡ್ ಅಧಿಕೃತವಾಗಿ ಸುಧಾಕರನ್ ಅವರಿಗೆ ಮಾಹಿತಿ ನೀಡಿದೆ. ಅನಿಶ್ಚಿತತೆ ಮತ್ತು ಗೊಂದಲಗಳ ನಡುವೆ ಹೈಕಮಾಂಡ್ ಅಂತಿಮವಾಗಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿತು.
ತಾರಿಕ್ ಅನ್ವರ್ ಈ ಹಿಂದೆ ಕೇರಳ ನಾಯಕರೊಂದಿಗೆ ವಿಸ್ಕøತ ಚರ್ಚೆ ನಡೆಸಿದ್ದರು. ಕೆ ಸುಧಾಕರನ್ ಅಧ್ಯಕ್ಷ ಸ್ಥಾನ ವಹಿಸಬೇಕು ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲಿ ಎಪ್ಪತ್ತು ಪ್ರತಿಶತ ಜನರ ಅಭಿಪ್ರಾಯವಿತ್ತು. ಗುಂಪು ಸಮೀಕರಣಗಳಿಗೆ ಮಾನ್ಯತೆ ನೀಡದೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಗುಂಪುಗಳ ಮುಖಂಡರೊಂದಿಗೆ ಕೆಲಸ ಮಾಡುವುದು ಸುಧಾಕರನ್ ಅವರಿಗೆ ದೊಡ್ಡ ಸವಾಲಾಗಿದೆ.