HEALTH TIPS

ಸಮರಸ: ಚಿಗುರು: ಪ್ರತಿಭೆ: ಪ್ರಣತಿ ಎನ್.ಪುದುಕೋಳಿ

 ಬದಲಾದ ವರ್ತಮಾನದಲ್ಲಿ ವಿದ್ಯಾರ್ಥಿಗಳ ದೈನಂದಿನ ಬದುಕು ಅಂಕೆಮೀರಿ ಗೊಂದಲಗೊಳಗಾಗುತ್ತಿರುವುದು ಇತ್ತೀಚೆಗಿನ ವರದಿಗಳಿಂದ ತಿಳಿದುಬರುತ್ತಿದೆ. ಶಾಲಾ ಶಿಕ್ಷಣವೂ ಇಲ್ಲದೆ ಪುಟಾಣಿ ಮಕ್ಕಳು ಮನೆಯಲ್ಲೇ ದಿನ ಕಳೆಯುವುದು ಮಕ್ಕಳಿಗೂ, ಪೋಷಕರಿಗೂ ಸವಾಲಿನದ್ದೆ.

ಈ ಮಧ್ಯೆ ಹಲವೆಡೆ ಪುಟ್ಟ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡು ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿರುವುದೂ ಹೌದು. ಪೋಷಕರ, ತಮ್ಮ ಸಹವರ್ತಿಗಳ ನೆರವಿನೊಂದಿಗೆ ಅನೇಕ ಮಕ್ಕಳು ವಿವಿಧ ಸಕಾರಾತ್ಮಕ ಚಟುವಟಿಕೆಗಳಲ್ಲಿ ವ್ಯಸ್ಥರಾಗಿ ಭರವಸೆ ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನೀರ್ಚಾಲು ಸಮೀಪದ ಪುದುಕೋಳಿಯ ಉದಯ ಶಂಕರ ಭಟ್ ಶ್ರೀಮತಿ ಸೌಮ್ಯ ದಂಪತಿಗಳ ಸುಪುತ್ರಿ ಪ್ರಣತಿ ಎನ್ ತನ್ನದೇ ವಿಶಿಷ್ಟ ಹವ್ಯಾಸದ ಮೂಲಕ ಬೆರಗುಗೊಳಿಸಿದ್ದಾಳೆ. ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ೪ನೇ ತರಗತಿಯ ವಿದ್ಯಾರ್ಥಿನಿಯಾದ ಈ ಪುಟಾಣಿ ಪೋಷಕರ, ಸಹೋದರಿಯರ ಸಹಕಾರದೊಂದಿಗೆ ವಿವಿಧ ನಮೂನೆಯ ಕ್ರಾಪ್ಟ್ ರಚನೆಯ ಮೂಲಕ ಭರವಸೆ ಮೂಡಿಸಿದ್ದಾಳೆ. ಈಕೆಯ ಸಾಧನೆ ಗಮನಿಸಿ ಚಿಂಟು ಟಿವಿ ವಾಹಿನಿ ಕೂಡ|ಆ ಇತ್ತೀಚೆಗೆ ಇವಳದೊಂದು ಕಾರ್ಯಕ್ರಮವನ್ನೂ ಪ್ರಸ್ತುತಪಡಿಸಿತ್ತು.
           ವಿದ್ಯಾರ್ಥಿಗಳ, ಪುಟಾಣಿಗಳ ಸರ್ವತೋಮುಖ ಶ್ರೇಯಸ್ಸಿಗೆ ವಿವಿಧ ನಮೂನೆಯ ಪ್ರಯತ್ನಗಳು ನಿರಂತರವಾಗಿರಬೇಕು. ಶಾಲಾ ಶಿಕ್ಷಣವಿಂದು ಮರೀಚಿಕೆಯಾಗಿರುವ ಹೊಸತೊಂದು ಕಾಲಘಟ್ಟದಲ್ಲಿ ಸಾಗುತ್ತಿರುವ ನಮಗೆ ನಮ್ಮ ಭಾವೀ ಜನಾಂಗವನ್ನು ಸಮರ್ಥವಾಗಿ ಕಡೆದು ನಿಲ್ಲಿಸುವ ಹೊಣೆಗಾರಿಕೆ ಇದ್ದು, ಈ ನಿಟ್ಟಿನಲ್ಲಿ ಪ್ರಣತಿಯ ಈ ಸಾಧನೆ ಇತರರಿಗೂ ಪ್ರೇರಣೆಯಾಗಲೆಂದು ಸಮರಸ ಸುದ್ದಿ ಪುಟಾಣಿಯ ಪರಿಚಯಾತ್ಮಕ ಸಾಧನಾ ವಿವರಗಳನ್ನು ನೀಡುತ್ತಿದೆ.
                          ವೀಕ್ಷಿಸಿ, ಪ್ರೋತ್ಸಾಹಿಸಿ..ಇದು ಓದುಗರು ರೂಪಿಸಿದ ಗಡಿನಾಡಿನ ಏಕೈಕ ಪರಿಪೂರ್ಣ ಸುದ್ದಿ ಮಾಧ್ಯಮ ಸಮರಸ ಸುದ್ದಿ.
 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries