ತಿರುವನಂತಪುರ: ಕೆಎಸ್‍ಆರ್‍ಟಿಸಿ, ಲೋಗೋ ಮತ್ತು 'ಆನ ವಂಡಿ' (ಐರಾವತ)ಎಂಬ ಸಂಕ್ಷಿಪ್ತ ರೂಪ ಇನ್ನು ಕೇರಳ ರಾಜ್ಯದಲ್ಲಿ ಮಾತ್ರ ಬಳಸಬಹುದಾಗಿದೆ. ಕೇರಳ ಮತ್ತು ಕರ್ನಾಟಕದ ರಸ್ತೆ ಸಾರಿಗೆ ನಿಗಮದ ವಾಹನಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಹೆಸರನ್ನು ಇನ್ನು ಕೇರಳದಲ್ಲಿ ಮಾತ್ರ ಬಳಸಬಹುದಾಗಿದೆ.
ಎರಡೂ ರಾಜ್ಯಗಳು ಹಲವಾರು ವರ್ಷಗಳಿಂದ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಹೆಸರನ್ನು ಬಳಸುತ್ತಿವೆ. ಆದರೆ, 2014 ರಲ್ಲಿ ಕರ್ನಾಟಕವು ಕೆ.ಎಸ್.ಆರ್.ಟಿ.ಸಿ ಎಂಬುದನ್ನು ಕರ್ನಾಟಕಕ್ಕೆ ಸೇರಿದ್ದು ಕೇರಳ ಸಾರಿಗೆ ಬಳಸಬಾರದು ಎಂದು ನೋಟಿಸ್ ಕಳುಹಿಸಿತ್ತು. ಅಂದು ಕೇರಳದ ಕೆ.ಎಸ್.ಆರ್.ಟಿಸಿ. ಸಿಎಂಡಿ ಆಗಿದ್ದ ದಿವಂಗತ ಆಂಥೋನಿ ಚಾಕೊ ಅವರು ಕೇರಳಕ್ಕೆ ಕೇಂದ್ರ ಸರ್ಕಾರದ ಅಡಿಯಲ್ಲಿ ಟ್ರೇಡ್‍ಮಾರ್ಕ್‍ಗಳ ರಿಜಿಸ್ಟ್ರಾರ್‍ಗೆ ಅರ್ಜಿ ಸಲ್ಲಿಸಿದರು. ಆ ಬಳಿಕ ಹಲವಾರು ವರ್ಷಗಳ ಕಾನೂನು ಹೋರಾಟಗಳು ನಡೆದವು.
ಅಂತಿಮವಾಗಿ, ಟ್ರೇಡ್‍ಮಾರ್ಕ್‍ಗಳ ಕಾಯ್ದೆ 1999 ರ ಅಡಿಯಲ್ಲಿ, ಕೆಎಸ್‍ಆರ್‍ಟಿಸಿ, ಲಾಂಛನ ಮತ್ತು ಅನವಂಡಿ ಎಂಬ ಸಂಕ್ಷೇಪ ನಾಮರೂಪವನ್ನು ಕೇರಳ ರಸ್ತೆ ಸಾರಿಗೆ ನಿಗಮವು ಮಂಜೂರು ಮಾಡಿತು ಮತ್ತು ಟ್ರೇಡ್‍ಮಾಕ್ರ್ಸ್ ಆಫ್ ರಿಜಿಸ್ಟ್ರಿಯಿಂದ ಹೊರಡಿಸಲ್ಪಟ್ಟಿತು. “ಕೇರಳದ ಕೆಎಸ್‍ಆರ್‍ಟಿಸಿಯ ಇತಿಹಾಸವು ಜನರ ಜೀವನದೊಂದಿಗೆ ಹೆಣೆದುಕೊಂಡಿದೆ. ಇದು ಕೇವಲ ವಾಹನ ಸೇವೆಯಲ್ಲ. ಈ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಸಿನೆಮಾ ಮತ್ತು ಸಾಹಿತ್ಯ ಸೇರಿದಂತೆ ನಮ್ಮ ಸಾಂಸ್ಕøತಿಕ ಜೀವನದ ಮೇಲೆ ತನ್ನ ಛಾಪು ಮೂಡಿಸಿದೆ. ಅದನ್ನು ಅಷ್ಟು ಬೇಗ ಅಳಿಸಲಾಗದು. ಟ್ರೇಡ್‍ಮಾರ್ಕ್ ನೋಂದಣಿ ಈ ವಿಷಯಗಳನ್ನು ಸ|ಂಪೂರ್ಣವಾಗಿ ಒಪ್ಪಿ ಆದೇಶ ಹೊರಡಿಸಲು ಸಾಧ್ಯವಾಯಿತು. ಇದು ಕೆ.ಎಸ್.ಆರ್.ಟಿ.ಸಿ.ಯ ಸಾಧನೆಯಾಗಿದೆ ”ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿರುವರು.
ಕೆಎಸ್‍ಆರ್‍ಟಿಸಿಯನ್ನು ಇನ್ನು ಕೇರಳ ಮಾತ್ರ ಬಳಸಬಹುದಾಗಿದೆ ಮತ್ತು ಆದ್ದರಿಂದ ಶೀಘ್ರದಲ್ಲೇ ಕರ್ನಾಟಕಕ್ಕೆ ನೋಟಿಸ್ ಕಳುಹಿಸಲಾಗುವುದು ಎಂದು ಕೆಎಸ್‍ಆರ್‍ಟಿಸಿ ಎಂಡಿ ಮತ್ತು ಸಾರಿಗೆ ಕಾರ್ಯದರ್ಶಿ ಬಿಜು ಪ್ರಭಾಕರ್ ಹೇಳಿದ್ದಾರೆ. 'ಆನವಂಡಿ' ಹೆಸರನ್ನು ಅನೇಕರು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜು ಪ್ರಭಾಕರ್ ಹೇಳಿದರು.