ತಿರುವನಂತಪುರ: ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಹಿನ್ನೆಲೆಯಲ್ಲಿ ಇಂದಿನಿಂದ(ಗುರುವಾರ) ಪ್ರಯಾಣಿಕರು ಇಟ್ಟುಕೊಳ್ಳಬೇಕಾದ ದಾಖಲೆಗಳ ಕುರಿತು ರಾಜ್ಯ ಪೋಲೀಸ್ ಮುಖ್ಯಸ್ಥರು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಎಲ್ಲಿ ಪ್ರಯಾಣಿಸಬೇಕು:
ಪರೀಕ್ಷಾ ಸಕಾರಾತ್ಮಕತೆ ದರವು ಶೇ.8 ಕ್ಕಿಂತ ಕಡಿಮೆ ಇರುವ ಸ್ಥಳಗಳಿಗೆ (ನಿರ್ಬಂಧಗಳ ವಿನಾಯ್ತಿ ಹೊಂದಿರುವ ಪ್ರದೇಶಗಳು) ಮತ್ತು ಭಾಗಶಃ ಲಾಕ್‍ಡೌನ್ ಇರುವ ಸ್ಥಳಗಳಿಗೆ ಪ್ರಯಾಣಿಸಲು ಪಾಸ್‍ಗಳು ಅಗತ್ಯವಿಲ್ಲ. ಆದರೆ ಅಫಿಡವಿಟ್ ಅಗತ್ಯವಿದೆ. ಮೇಲಿನ ಎರಡು ಸ್ಥಳಗಳಿಂದ ಲಾಕ್‍ಡೌನ್ ಇರುವ ಪ್ರದೇಶಗಳಿಗೆ ಪ್ರಯಾಣಿಸುವವರಿಗೆ ವಿವಾಹ, ಅಂತ್ಯಕ್ರಿಯೆಗಳು, ನಿರ್ಮಾಣ ಚಟುವಟಿಕೆಗಳು ಮತ್ತು ಕೈಗಾರಿಕಾ ಉದ್ದೇಶಗಳಂತಹ ಪ್ರಯಾಣಕ್ಕಾಗಿ ಪಾಸ್ ಅಗತ್ಯವಿರುತ್ತದೆ.
ಪಾಸ್ ಪಡೆಯಲು:
ಸಂಪೂರ್ಣ ಲಾಕ್‍ಡೌನ್ ಇರುವ ಪ್ರದೇಶಗಳಿಂದ ನಿರ್ಬಂಧಗಳು ಸಡಿಲಗೊಳಿಸಿದ ಪ್ರದೇಶಗಳಿಗೆ ಮತ್ತು ಭಾಗಶಃ ಲಾಕ್‍ಡೌನ್ ವಿಧಿಸಲಾದ ಪ್ರದೇಶಗಳಿಗೆ ಪ್ರಯಾಣಿಸಲು ಪಾಸ್ ಅಗತ್ಯವಿದೆ. ಪಾಸ್ ಪಡೆಯಲು ಕಷ್ಟಪಡುವವರು ಅಗತ್ಯವಿರುವ ದಾಖಲೆಗಳೊಂದಿಗೆ ಹತ್ತಿರದ ಪೋಲೀಸ್ ಠಾಣೆಯಲ್ಲಿ ಶ್ವೇತಪತ್ರದಲ್ಲಿ ಪಾಸ್ ಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಈ ರೀತಿ ಸಿದ್ಧಪಡಿಸಬೇಕು:
ಸ್ಥಳೀಯ ಆಡಳಿತ ಸಂಸ್ಥೆಯ ಪೂರ್ಣ ವಿಳಾಸ ಮತ್ತು ಆಗಮನದ ಸ್ಥಳದ ವಾರ್ಡ್ ಹೆಸರು, ಪ್ರಯಾಣಿಸುವ ವ್ಯಕ್ತಿಯ ಹೆಸರು ಮತ್ತು ವಿಳಾಸ, ದೂರವಾಣಿ ಸಂಖ್ಯೆ, ಗಮ್ಯಸ್ಥಾನ ಮತ್ತು ವಾಹನ ಸಂಖ್ಯೆಯನ್ನು ಸೇರಿಸುವ ಮೂಲಕ ಅರ್ಜಿಯನ್ನು ಸಿದ್ಧಪಡಿಸಬೇಕು. ಟ್ರಿಪಲ್ ಲಾಕ್ ಡೌನ್ ಇರುವಲ್ಲಿಂದ ಮರಣೋತ್ತರ ಸಮಾರಂಭಗಳು, ಪರೀಕ್ಷೆಗಳು ಮತ್ತು ವೈದ್ಯಕೀಯ ಅಗತ್ಯಗಳಿಗಾಗಿ ಮಾತ್ರ ಹೊರತೆರಳಬಹುದಾಗಿದೆ. ಗುರುತಿನ ಚೀಟಿ, ಹಾಲ್ ಟಿಕೆಟ್ ಮತ್ತು ವೈದ್ಯಕೀಯ ದಾಖಲೆಗಳನ್ನು ಹೊಂದಿರಬೇಕು.
ಆಲ್ಕೋಹಾಲ್ ಖರೀದಿಸಲು ಬರುವುದಾದರೆ:
ಮದ್ಯ ಮಾರಾಟ ಪುನರಾರಂಭವಾಗುವ ಕಾರಣ ಮದ್ಯದಂಗಡಿಗಳಿಗೆ ಬರುವವರು ಮಾಸ್ಕ್ ಮತ್ತು ನೈರ್ಮಲ್ಯವನ್ನು ನೋಡಿಕೊಳ್ಳಬೇಕು. ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು. ಇವುಗಳನ್ನು ಖಚಿತಪಡಿಸಿಕೊಳ್ಳಲು ಪೋಲೀಸ್ ಕಣ್ಗಾವಲು ಇಡಲಾಗುವುದು. ಅಂತಹ ಸಂಸ್ಥೆಗಳ ಬಳಿ ಗಸ್ತು ತಿರುಗುವುದನ್ನು ಬಿಗಿಗೊಳಿಸಲಾಗುವುದು ಎಂದು ಡಿಜಿಪಿ ಹೇಳಿರುವರು. ಬೆವ್ಕೊ ಅಪ್ಲಿಕೇಶನ್ ನ್ನು ಹೊರತುಪಡಿಸಿ ನೇರವಾಗಿ ಬೆವ್ಕೊ ಮಳಿಗೆಗಳಿಂದಲೇ ಮದ್ಯ ಮಾರಾಟ ಮಾಡಲಾಗುತ್ತದೆ. ಮೊನ್ನೆ ಬಿಡುಗಡೆಯಾದ ವರದಿಯ ಪ್ರಕಾರ, ಬೆವ್ಕ್ಯೂ ಅಪ್ಲಿಕೇಶನ್ ಬಳಸಿ ಸ್ಲಾಟ್‍ಗಳನ್ನು ಅನುಮತಿಸಲಾಗುವುದು ಎಂದಿರುವುದು ಅಪ್ಲಿಕೇಶನ್ ಅಸಮರ್ಥತೆಯ ಕಾರಣ ಇದೀಗ ಬದಲಾಯಿಸಲಾಗಿದೆ.