ತಿರುವನಂತಪುರ: ದೇವಸ್ವಂ ಮಂಡಳಿಗಳನ್ನು ಬಜೆಟ್‍ನಲ್ಲಿ ನಿರ್ಲಕ್ಷಿಸಲಾಗಿದೆ. ಎರಡನೇ ಪಿಣರಾಯಿ ಸರ್ಕಾರ ಮೊದಲ ಬಜೆಟ್‍ನಲ್ಲಿ ದೇವಸ್ವಂ ಮಂಡಳಿಗಳಿಗೆ ಹಣ ಹಂಚಿಕೆ ಮಾಡಿಲ್ಲ. ಕಳೆದ ರಾಜ್ಯ ಬಜೆಟ್‍ನಲ್ಲಿ ದೇವಸ್ವಂ ಮಂಡಳಿಗಳಿಗೆ 150 ಕೋಟಿ ರೂ.ಗಳ ಸಹಾಯಧನವನ್ನು ಸರ್ಕಾರ ಘೋಷಿಸಿತ್ತು.
ಕಳೆದ ಬಜೆಟ್‍ನಲ್ಲಿ ತಿರುವಾಂಕೂರು ಮತ್ತು ಕೊಚ್ಚಿ ದೇವಸ್ವಂ ಮಂಡಳಿಗಳಿಗೆ `118 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ತಿರುವಾಂಕೂರು ದೇವಸ್ವಂ ಮಂಡಳಿಗೆ ವಾರ್ಷಿಕ 8 ಕೋಟಿ ರೂ. ಮತ್ತು ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ 2 ಕೋಟಿ ರೂ. ಮೀಸಲಿರಿಸಿದ್ದರು. ಆದರೆ ಇಲ್ಲಿಯವರೆಗೆ, ಈ ಯಾವುದೇ ಹಣವನ್ನು ದೇವಸ್ವಂ ಮಂಡಳಿಗಳಿಗೆ ಲಭ್ಯವಾಗುವಂತೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರ್ಕಾರ ಘೋಷಿಸಿದ ಮೊತ್ತವನ್ನು ಪಾವತಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಹಲವಾರು ಪತ್ರಗಳನ್ನು ನೀಡಿದ್ದರೂ ತಿರುವಾಂಕೂರು ದೇವಸ್ವಂ ಮಂಡಳಿಗೆ ನಯಾ ಪೈಸೆಯೂ ಲಭಿಸಿಲ್ಲ.
ಈ ಬಜೆಟ್‍ನಲ್ಲಿ ಸರ್ಕಾರ ದೇವಸ್ವಂ ಮಂಡಳಿ ಮತ್ತು ಪದ್ಮನಾಭ ಸ್ವಾಮಿ ದೇವಾಲಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇತರ ಎಲ್ಲ ಕ್ಷೇತ್ರಗಳಂತೆ, ಕೊರೋನಾ ಸಾಂಕ್ರಾಮಿಕದ ಸವಾಲುಗಳು ದೇವಸ್ವಂ ಬೋರ್ಡ್‍ಗಳನ್ನು ತೀವ್ರವಾಗಿ ಬಾಧಿಸಿವೆ. ತಿರುವಾಂಕೂರು-ಕೊಚ್ಚಿ-ಮಲಬಾರ್ ದೇವಸ್ವಂ ಮಂಡಳಿಗಳು ನೌಕರರ ವೇತನ ಮತ್ತು ದೇವಾಲಯಗಳ ದೈನಂದಿನ ವೆಚ್ಚವನ್ನು ಭರಿಸಲು ತಿಣುಕಾಡುತ್ತಿವೆ. ತಿರುವಾಂಕೂರು ದೇವಸ್ವಂ ಮಂಡಳಿಯು ಹಳೆಯ ಮಣ್ಣಿನ ಪಾತ್ರೆಗಳನ್ನು ಮಾರಾಟ ಮಾಡಬೇಕಾದ ಹಂತವನ್ನು ತಲುಪಿದೆ. ದೇವಾಲಯಗಳ ದೈನಂದಿನ ದಿನಚರಿಯು ಪ್ರಶ್ನಾರ್ಹವಾಗಿರುವ ಈ ಪರಿಸ್ಥಿತಿಯಲ್ಲಿ, ಎಡ ಸರ್ಕಾರವು ದೇವಾಲಯಗಳನ್ನು ಮತ್ತು ಭಕ್ತ ಸಮೂಹವನ್ನು ದೂರವಿಟ್ಟಿದೆ.
ಆದಾಯ ನಷ್ಟದಿಂದಾಗಿ ಶಬರಿಮಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ತಲೆಕೆಳಗಾಗಿವೆ. ನೌಕರರ ವೇತನವನ್ನು ಪಾವತಿಸಲು ಅನೇಕ ಸ್ಥಿರ ಠೇವಣಿಗಳನ್ನು ತಿರುವಾಂಕೂರು ದೇವಸ್ವಂ ಮಂಡಳಿಗೆ ವರ್ಗಾಯಿಸಬೇಕಾಗಿದೆ. ಮುಂಬರುವ ತಿಂಗಳುಗಳಲ್ಲಿ ದೇವಾಲಯಗಳ ವ್ಯವಸ್ಥೆಗಳು ದೊಡ್ಡ ಬಿಕ್ಕಟ್ಟಿನತ್ತ ಸಾಗುತ್ತಿರುವುದು ವೇದ್ಯವಾಗಿದ್ದು, ಪಿಣರಾಯಿ ಸರ್ಕಾರವು ಕ್ಷೇತ್ರಗಳ ಆದಾಯ ಪರಿಗಣಿಸದೆ ದೇವಾಲಯಗಳ ಅವನತಿಗೆ ಕಾರಣವಾಗುತ್ತಿದೆ.