ಕಾಸರಗೋಡು: ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ ಮತ್ತು ಹವಾಮಾನ ಬೆಳೆ ವಿಮೆ ಯೋಜನೆಯ 2021 ವರ್ಷದ ಪ್ರಕಟಣೆಯಾಗಿದೆ.
ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಲ್ಲಿ ಎಲ್ಲ ಜಿಲ್ಲೆಗಳ ಬಾಳೆ, ಮರಗೆಣಸು ಸೇರಿಸಲಾಗಿದೆ. ಹವಾಮಾನ ಬೆಳೆ ವಿಮೆ ಯೋಜನೆಯಲ್ಲಿ ಭತ್ತ, ಬಳೆ, ಕರಿಮೆಣಸು, ಹಳದಿ, ಶುಂಠಿ, ಅನಾನಾಸು, ಕೊಕ್ಕೋ, ಕಬ್ಬು, ಏಲಕ್ಕಿ, ಅಡಕೆ, ಟೊಮೆಟೋ, ಜೋಳ, ರಾಗಿ ಸಹಿತ ಕಿರು ಧಾನ್ಯಗಳು, ಅಲಸಂಡೆ, ಪಡುವಲ, ಸೌತೆ, ತೊಂಡೆ, ಬೆಂಡೆ, ಹಸಿಮೆಣಸು ಇತ್ಯಾದಿ ತರಕಾರಿಗಳನ್ನು ಸೇರ್ಪಡೆಗೊಳಿಸಲಾಗಿದೆ.
ಪ್ರಧಾನಂತ್ರಿ ಬೆಳೆ ವಿಮೆ ಯೋಜನೆಯಲ್ಲಿ ಸ್ಥಳೀಯ ತಳಹದಿಯಲ್ಲಿ ಬೆಳೆಯ ನಷ್ಟ, ನೇಜಿಗೆ ತೊಡಕು, ಎಡೆಬೆಳೆ ನಷ್ಟ, ನೆರೆ( ಭತ್ತದ ಹೊರತಾಗಿ), ಮಳೆ, ಬಂಡೆ ಉರುಳುವಿಕೆ, ಸಿಡಿಲಿನ ಆಘಾತದಿಂದ ಬೆಂಕಿಯಿಂದ ಸುಟ್ಟು ನಷ್ಟ ಇತ್ಯಾದಿ ವ್ಯಕ್ತಿಗತ ನಾಶನಷ್ಟಗಳಿಗೆ ನಿಬಂಧನೆಗಳಿಗನುಗುಣವಾಗಿ ನಷ್ಟಪರಿಹಾರ ಲಭ್ಯವಿದೆ.
ಹವಾಮಾನ ಬೆಳೆ ವಿಮೆಯೋಜನೆಯಲ್ಲಿ ಪ್ರತಿ ಆಯ್ದ ಪ್ರದೇಶಕ್ಕೆ ಸಂಬಂಧಿತ ಹವಾಮಾನ ನೆಲೆ ದಾಖಲಿಸಿ ಮಾತ್ರ ನಷ್ಟಪರಿಹಾರ ನಿಗದಿ ಮಾಡಲಾಗುತ್ತದೆ. ಬಾಳೆ, ಜಾತಿ, ಅಡಕೆ, ಕರಿಮೆಣಸು, ಏಲಕ್ಕಿ, ಕೊಕ್ಕೋ ಬೆಳೆಗಳಿಗೆ ನೆರೆ, ಬಿರುಸಿನ ಗಾಳಿ ಇತ್ಯಾದಿ ಕಾರಣ ಕಾಸರಗೋಡು, ಆಲಪ್ಪುಳ ಜಿಲ್ಲೆಗಳನ್ನು ಹೊರತುಪಡಿಸಿ ಬಂಡೆ ಉರುಳುವಿಕೆ ಕಾರಣ ವ್ಯಕ್ತಿಗತ ನಾಶ-ನಷ್ಟ ಯೋಜನೆಗಳ ನಿಬಂಧನೆಗನುಗುಣವಾಗಿ ನಷ್ಟ ಪರಿಹಾರ ಲಭ್ಯವಿದೆ.
ಪ್ರತಿ ಬೆಳೆಯ ವಿಮೆ ಮೊತ್ತ, ಪ್ರೀಮಿಯಂ ದರ ವಿಭಿನ್ನವಾಗಿರುವುದು. ಜುಲೈ 31ರ ಮುಂಚಿತವಾಗಿ ಯೋಜನೆಯಲ್ಲಿ ಸೇರಿಬೇಕು. ಕೃಷಿಕರು www. pmfby.gov.in ಎಂಬ ವೆಬ್ ಸೈಟ್ ನಲ್ಲಿ ಆನ್ ಲೈನ್ ಆಗಿ, ಡಿಜಿಟಲ್ ಸೇವಾ ಕೇಂದ್ರಗಳ ಮೂಲಕ, ಆಯ್ದ ಅಕ್ಷಯ ಕೇಂದ್ರಗಳ ಮೂಲಕ, ವಿಮೆ ಬ್ರೋಕರ್ ಪ್ರತಿನಿಧಿಗಳ ಮೂಲಕ ಯೋಜನೆಯಲ್ಲಿ ಸೇರಬಹುದು. ಬೆಳೆಗಳಿಗೆ ಸಾಲ ಪಡೆದಿರುವ ಕೃಷಿಕರನ್ನು ನಿಗದಿತ ಬ್ಯಾಂಕ್ ಗಳು ಯೋಜನೆಯಲ್ಲಿ ಸೇರ್ಪಡೆಗೊಳಿಸಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ನಕಲು ಇತ್ಯಾದಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಗೆ ಸಮೀಪದ ಕೃಷಿಭವನ ಯಾ ಕೃಷಿ ವಿಮೆ ಕಂಪನಿಯ ರೀಜನಲ್ ಕಚೇರಿ ಯನ್ನು ಸಂಪರ್ಕಸಬಹುದು. ದೂರವಾಣಿ ಸಂಖ್ಯೆಗಳು: 04712334493, 1800-4257064( ಟೋಲ್ ಫ್ರೀ).