HEALTH TIPS

ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಳಕ್ಕೆ ಇರಲಿಲ್ವಾ ಭಾರತೀಯ ವಿಜ್ಞಾನಿಗಳ ಬೆಂಬಲ?: ಬಹಿರಂಗವಾಯ್ತು ಸತ್ಯ!

             ನವದೆಹಲಿಕೊರೋನಾ ಲಸಿಕೆ ಕೋವಿಶೀಲ್ಡ್ ನ 2 ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸುವುದಕ್ಕೆ ವಿಜ್ಞಾನಿಗಳ ಬೆಂಬಲ ಇರಲಿಲ್ವಾ? ಹೀಗೊಂದು ಪ್ರಶ್ನೆ ಈಗ ರಾಯ್ಟರ್ಸ್ ವರದಿಯಿಂದ ಉದ್ಭವಿಸಿದೆ.

          ಲಸಿಕೆ ಡೋಸ್ ಗಳ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ ಮೇ.13 ರಂದು ಏರಿಕೆ ಮಾಡಿರುವುದನ್ನು ಆರೋಗ್ಯ ಸಚಿವಾಲಯ ಘೋಷಿಸಿತ್ತು. ಆದರೆ ಈ ನಿರ್ಧಾರವನ್ನು ವೈಜ್ಞಾನಿಕ ಗುಂಪಿನ ಸಂಪೂರ್ಣ ಒಪ್ಪಿಗೇ ಇಲ್ಲದೇ ಕೈಗೊಳ್ಳಲಾಗಿರುವುದನ್ನು ಸಲಹಾ ಸಮಿತಿಯ ಮೂವರು ಸದಸ್ಯರು ಹೇಳಿರುವುದನ್ನು ರಾಯ್ಟರ್ಸ್ ಉಲ್ಲೇಖಿಸಿದೆ.

          ಲಸಿಕೆ ಹಾಕುವ ವಿಷಯದ ಬಗ್ಗೆ ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಬ್ರಿಟನ್ ನ ರಿಯಲ್-ಲೈಫ್ ಎವಿಡೆನ್ಸ್ ಆಧಾರದಲ್ಲಿ ಲಸಿಕೆ ಡೋಸ್ ನಡುವಿನ ಅಂತರವನ್ನು ಹೆಚ್ಚಿಸುವುದಕ್ಕೆ ಶಿಫಾರಸ್ಸು ಮಾಡಿತ್ತು ಎಂದು ಆರೋಗ್ಯ ಸಚಿವಾಲಯ ಹೇಳಿತ್ತು.

ಆದರೂ ಎನ್ ಟಿಎಜಿಐ ವಿಜ್ಞಾನಿಗಳು, ಸರ್ಕಾರದಿಂದ ವರ್ಗೀಕರಿಸಲಾದ 14 ಕೋರ್ ಸದಸ್ಯರ ಪೈಕಿ ಮೂವರು ಈ ರೀತಿಯ ಶಿಫಾರಸ್ಸು ಮಾಡುವುದಕ್ಕೆ ಸಾಕಷ್ಟು ಅಂಕಿ-ಅಂಶ, ಡಾಟಾ, ಮಾಹಿತಿಗಳಿಲ್ಲ ಎಂದು ಹೇಳಿದ್ದರು.

           ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಮಾಜಿ ನಿರ್ದೇಶಕ ಎಂಡಿ ಗುಪ್ತೆ ಎನ್ ಟಿಎಜಿಐ ಡೋಸ್ ಗಳ ನಡುವಿನ ಅಂತರವನ್ನು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದ್ದ 8-12ಕ್ಕೆ ನಿಗದಿಪಡಿಸಲು ಒಪ್ಪಿಗೆ ನೀಡಿತ್ತು. ಆದರೆ ಈ ಗುಂಪಿಗೆ, 12 ವಾರಗಳ ಬಳಿಕವೂ ಎರಡನೇ ಡೋಸ್ ಲಸಿಕೆ ಅಂತರದ ಪರಿಣಾಮಗಳ ಬಗ್ಗೆ ಡಾಟಾ ಇರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೇ ಎನ್ ಟಿಜಿಐ ನಲ್ಲಿನ ಅವರ ಸಹೋದ್ಯೋಗಿ ಮ್ಯಾಥ್ಯೂ ವರ್ಗೀಸ್ ಹೇಳಿದ್ದು, ಗುಂಪಿನ ಶಿಫಾರಸ್ಸು ಇದ್ದದ್ದು 8-12 ವಾರಗಳಿಗೆ ಅಷ್ಟೇ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries