ತಿರುವನಂತಪುರ: ರಾಜ್ಯ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಅವರು ವಿಶ್ವ ಪರಿಸರ ದಿನದಂದು ತಮ್ಮ ಮಾವನ ಹೆಸರಿನಲ್ಲಿ ಮರವೊಂದನ್ನು ನೆಟ್ಟರು. ತಮ್ಮ ಪತ್ನಿಯ ತೀರ್ಥರೂಪರಾದ ಪಿ. ಗೋವಿಂದ ಪಿಳ್ಳೈ ಹೆಸರಿನಲ್ಲಿ ಸಂಪಿಗೆ ಗಿಡವನ್ನು ನೆಟ್ಟು ಸಚಿವರು ಗಮನ ಸೆಳೆದಿರುವರು. ಸ್ಟುಡೆಂಟ್ ಪೋಲೀಸ್ ಕೆಡೆಟ್ ಆಯೋಜಿಸಿದ್ದ ಮೈ ಟ್ರೀ ಮೈ ಡ್ರೀಮ್ ಯೋಜನೆಯ ಉದ್ಘಾಟನೆಯ ಅಂಗವಾಗಿ ಗಿಡ ನೆಡಲಾಯಿತು.
ಕಾರ್ಯಕ್ರಮವನ್ನು ತಮ್ಮ ಮನೆಯ ಆವರಣದಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್‍ಪಿಸಿ ಕೆಡೆಟ್‍ಗಳು ಮತ್ತು ಸಿಟಿ ನೋಡಲ್ ಕಚೇರಿಯ ಅಧಿಕಾರಿಗಳು ಭಾಗವಹಿಸಿದ್ದರು. ಉದ್ಘಾಟನೆಯ ಬಳಿಕ ಕೆಡೆಟ್‍ಗಳು ರಾಜ್ಯದಲ್ಲಿ ಒಂದು ಕೋಟಿ ಸಸಿಗಳನ್ನು ನೆಡಲು ಮತ್ತು ನಿರ್ವಹಿಸಲು ಭರವಸೆ ನೀಡಿದರು. ಆದರ್ಶಪ್ರಾಯವಾದ ಕೆಲಸಕ್ಕೆ ಎಲ್ಲ ಬೆಂಬಲ ನೀಡಲಾಗುವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.