ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸಿದ್ಧಗೊಳ್ಳುತ್ತಿದೆ ಮಾದರಿ ಹಾದಿ. ಈ ರಸ್ತೆಯ ಉಭಯ ಕಡೆಗಳಲ್ಲಿ ನೆರಳು ನೀಡಲಿವೆ ಅಶೋಕ ವೃಕ್ಷಗಳು.
ನಾಯನ್ಮಾರುಮೂಲೆಯ ತನ್ ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯ ಮೂಲಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರ ಅಧಿಕೃತ ವಸತಿ ವರೆಗಿನ ರಸ್ತೆಯನ್ನು ಮಾದರಿ ಹಾದಿಯಾಗಿ ನಿಮಿಸಲಾಗುತ್ತಿದೆ.
ಜೊತೆಗೆ ಕಾಸರಗೋಡು ಜಿಲ್ಲೆಯ ಮಂದಿಗೆ ಅಷ್ಟೇನೂ ಪರಿಚಯವಿರದ ರೋಲರ್ ಸ್ಕೇಟಿಂಗ್ ನಲ್ಲೊಂದು ಯತ್ನ ನಡೆಸುವ ಅವಕಾಶದ ಹದ ತೆರೆಯಲಿದೆ. ರಸ್ತೆಯೊಂದು ಈ ನಿಟ್ಟಿನಲ್ಲಿ ಸಿದ್ಧಗೊಳ್ಳಲಿದ್ದು, ತರಬೇತಿಯೊಂದಿಗೆ ರೋಲರ್ ಸ್ಕೇಟಿಂಗ್ ನಡೆಸಲು ಸಾಧ್ಯವಾಗಲಿದೆ. ನೂತನ ಸೌಲಭ್ಯಗಳೊಂದಿಗೆ ನವೀಕರಣಗೊಳ್ಳುತ್ತಿರುವ ಈ ರಸ್ತೆಯ ನಿಮಾಣ ಅಂತಿಮ ಹಂತದಲ್ಲಿದೆ. 250 ಮೀಟರ್ ಉದ್ದದಲ್ಲಿ ಈ ಹಾದಿಯ ನವೀಕರಣ ನಡೆಯುತ್ತಿದೆ.
ಜಿಲ್ಲಾ ಪಂಚಾಯತ್ ಯೋಜನೆಯಲ್ಲಿ ಈ ರಸ್ತೆಯ ನವೀಕರಣ ನಡೆದುಬರುತ್ತಿದೆ. ಜಿಲ್ಲಾ ಕ್ರೀಡಾ ಮಂಡಳಿಯ ಸಹಕಾರದೊಂದಿಗೆ ಸ್ಕೇಟಿಂಗ್ ಸೌಲಭ್ಯ ಜಾರಿಗೊಳಿಸಲಾಗುವುದು. ಆಯ್ದ ಮಕ್ಕಳಿಗೆ ಉಚಿತವಾಗಿ ಈ ಸಂಬಂಧ ತರಬೇತಿ ನೀಡುವ ಯೋಜನೆಯಿದೆ. ಪರಂಪರಾಗತ ಕ್ರೀಡೆಗಳ ಜೊತೆಗೆ ಇತರ ಕ್ರೀಡೆಗಳ ವಲಯದಲ್ಲೂ ಮಕ್ಕಳಿಗೆ ಬೆಂಬಲ ನೀಡುವ ಯೋಜನೆಯನ್ನು ಜಿಲ್ಲಾ ಪಂಚಾಯತ್ ರಚಿಸಿದೆ.
ಬೆಳಗ್ಗೆ 6 ರಿಂದ 8 ಗಂಟೆ ವರೆಗೆ, ಸಂಜೆ 6 ರಿಂದ ರಾತ್ರಿ 8 ಗಂಟೆ ವರೆಗೆ ರೋಲರ್ ಸ್ಕೇಟಿಂಗ್ ತರಬೇತಿ ಇಲ್ಲಿ ನಡೆಸಲಾಗುವುದು. ಸಾವಜನಿಕ ಕೇಂದ್ರಗಳನ್ನು ಹೆಚ್ಚುವರಿ ಸೃಷ್ಟಿಸುವ ರಾಜ್ಯ ಸರಕಾರದ ಆದೇಶ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆಶಯ ಈ ಮೂಲಕ ಸಾಕಾರಗೊಳ್ಳುತ್ತಿದೆ.
ಇದರೊಂದಿಗೆ ಬೆಳಗ್ಗಿನ ವಾಕಿಂಗ್ ಗೂ ಇಲ್ಲಿ ವ್ಯವಸ್ಥೆಗಳಿವೆ. ಈ ಎಲ್ಲ ಕಾರಣಗಳಿಂದ ಈ ರಸ್ತೆ ಕಾಸರಗೋಡು ಜಿಲ್ಲೆಯ ಮಾದರಿ ಹಾದಿಯಾಗಿ ಮಾಪಾಡುಗೊಳ್ಳಲಿದೆ.
ಅಶೋಕ ಸಸಿಗಳ ನೆಡುವಿಕೆಗೆ ಚಾಲನೆ
ಈ ರಸ್ತೆಯ ಬದಿಗಳಲ್ಲಿ ಅಶೋಕ ಸಸಿಗಳನ್ನು ನೆಡುವ ಪ್ರಕ್ರಿಯೆಗೆ ಭಾನುವಾರ ಚಾಲನೆ ಲಭಿಸಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಅಶೋಕ ಸಸಿ ನೆಟ್ಟು ಉದ್ಘಾಟನೆ ನಡೆಸಿದರು. ಉಪಾಧ್ಯಕ್ಷ ಷಾನವಾಝ್ ಪಾದೂರು, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ ಈ ಕಾಯಕಕ್ಕೆ ಜತೆಸೇರಿದರು.
......