ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ಕುಂಬಳೆ ಗ್ರಾಮ ಪಂಚಾಯತಿಯ ಅರಿಕ್ಕಾಡಿ ಒಡ್ಡಿನಬಾಗಿಲು ನಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರವು ಅಂಗೀಕರಿಸಿದ ಸ್ಮಶಾನ ಭೂಮಿಯನ್ನು ಪಂಚಾಯತಿನ ಸ್ಥಿರ ಆಸ್ತಿ ರೆಜಿಸ್ಟರಲ್ಲಿ ಸೇರಿಸಬೇಕು ಮತ್ತು ಆ ಭೂಮಿಯನ್ನು ಅಳತೆ ಮಾಡಿ ಸುತ್ತುಗೋಡೆ ನಿರ್ಮಿಸಬೇಕು ಎಂದು ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಅಧ್ಯಕ್ಷ ಕೆ.ಸುಧಾಕರ ಕಾಮತ್ ಅವರು ಕುಂಬಳೆ ಗ್ರಾಮ ಪಂಚಾಯತ ಕಾರ್ಯನಿರ್ವಾಹಣಾ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಯುವ ಮೋರ್ಚ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಅರಿಕ್ಕಾಡಿ, ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ನೈಕಾಪು, ಗ್ರಾಮ ಪಂಚಾಯತಿ ಸದಸ್ಯ ಮೋಹನ ಬಂಬ್ರಾಣ ಮತ್ತು ಪಂಚಾಯತಿ ಮಾಜಿ ಸದಸ್ಯ ಸುಜಿತ್ ರೈ ಉಪಸ್ಥಿತರಿದ್ದರು.