ಮಲಪ್ಪುರಂ: ತನ್ನ ಪತ್ನಿ ಮತ್ತು ಪುತ್ರ ಇಸ್ಲಾಂಗೆ ಮತಾಂತರಗೊಳಿಸಿದ ತಂಡವನ್ನು ಪ್ರಶ್ನಿಸಿ ವಿರೋಧಿಸಿದ ಸಿಪಿಎಂ ಕಾರ್ಯಕರ್ತನನ್ನು ಪಕ್ಷ ಉಚ್ಚಾಟಿಸಿದ ಘಟನೆ ನಡೆದಿದೆ. ನೀರಲ್ಪಾಲಂ ಸಿಪಿಎಂ ಶಾಖಾ ಸಮಿತಿಯ ಸದಸ್ಯ ಪಿ.ಟಿ. ಗಿಲ್ಬರ್ಟ್ ವಿರುದ್ಧ ಸಿಪಿಎಂ ಕ್ರಮ ಕೈಗೊಂಡಿದೆ ಎಂದು ಮಲಪ್ಪುರಂ ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ಲಾಂಗೆ ಮತಾಂತರಗೊಳ್ಳಲು ಜನರ ಗುಂವೊಂದು ಪತ್ನಿ ಮತ್ತು ಪುತ್ರನನ್ನು ಪ್ರಲೋಭನೆಗೆ ಒಳಪಡಿಸಿದೆ ಎಂದು ಗಿಲ್ಬರ್ಟ್ ನಿನ್ನೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಟ್ಯಾಕ್ಸಿ ಡ್ರೈವರ್ ಆಗಿರುವ ಗಿಲ್ಬರ್ಟ್‍ನ ಪತ್ನಿ ಮತ್ತು ಪುತ್ರ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಬಳಿಕ ಅವರು ಕೋಝಿಕ್ಕೋಡ್‍ನ ಇಸ್ಲಾಮಿಕ್ ಧಾರ್ಮಿಕ ಕೇಂದ್ರದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೊತ್ತಿಗೆ ಇಬ್ಬರೂ ಇಸ್ಲಾಂಗೆ ಮತಾಂತರಗೊಂಡಿದ್ದರು. ತೆಂಜಿಪಾಲಂ ಪಂಚಾಯತ್ ಸದಸ್ಯ ನಜೀರಾ ಮತ್ತು ಕ್ಯಾಲಿಕಟ್ ವಿಶ್ವವಿದ್ಯಾಲಯದ ಉದ್ಯೋಗಿ ಪತಿ ಯೂನಸ್ ಅವರು ನೆರೆಹೊರೆಯವರನ್ನು ಮತಾಂತರಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರೆಂದು ಗಿಲ್ಬರ್ಟ್ ಆರೋಪಿಸಿದ್ದಾರೆ. ಗಿಲ್ಬರ್ಟ್ ಅಂತಹ ಗುಂಪುಗಳ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಸಿಪಿಎಂ ಮೂಲಭೂತವಾದಿಗಳ ಪರವಾಗಿ ಉಚ್ಚಾಟಿಸುವ ಮೂಲಕ ಕ್ರಮ ಕೈಗೊಂಡಿತು.