ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಜೂ.28,29.20ರಂದು ಬಿರುಸಿನ ಮಳೆ ಸುರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಈ ದಿನಗಳಲ್ಲಿ ಹಳದಿ ಅಲೆರ್ಟ್ ಘೋಷಿಸಲಾಗಿದೆ.
ಕಳೆದ ದಿನಗಳಲ್ಲಿ ಬಿರುಸಿನ ಮಳೆ ಸುರಿದಿದ್ದ ಪ್ರದೇಶಗಳಲ್ಲಿ ಇದೇ ರೀತಿ ಮಳೆ ಮುಂದುವರಿಯಲಿದ್ದು, ಕೆಳಸ್ತರದ ಪ್ರದೇಶಗಳು, ನದಿತಟ ಪ್ರದೇಶಗಳು, ಗುಡ್ಡ ಕುಸಿತ ಸಾಧ್ಯತೆಯ ಮಲೆನಾಡ ಪ್ರದೇಶಗಳ ಜನ ಅತೀವ ಜಾಗ್ರತೆ ಪಾಲಿಸುವಂತೆ ತಿಳಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಗುಡ್ಡಗಳಿಂದ ಬಂಡೆ ಉರುಳುವಿಕೆ, ಗುಡ್ಡ ಕುಸಿತ, ನೆರೆ ಹಾವಳಿ ಇತ್ಯಾದಿ ತಲೆದೋರಿದ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಬಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ರಾಜ್ಯ ಪಿಡುಗು ನಿವಾರಣೆ ಪ್ರಾಧಿಕಾರದ ಪರಿಣತ ಸಮಿತಿ ಅಪಾಯ ಸಾಧ್ಯತೆ ವಲಯಗಳು ಅಥವಾ ವಾಸಕ್ಕೆ ಯೋಗ್ಯವಲ್ಲದ ಪ್ರದೇಶಗಳು ಎಂದು ಪತ್ತೆ ಮಾಡಿರುವ ಜಾಗಗಳಲ್ಲಿ ವಾಸಿಸುತ್ತಿರುವವರು ಮತ್ತು ಸ್ಥಳೀಯಾಡಳಿತೆ ಸಂಸ್ಥೆಗಳು, ಸರಕಾರಿ ಕೇಂದ್ರಗಳು ಅಪಾಯ ಸಾಧ್ಯತೆ ಮುಂಗಡವಾಗಿ ಮನಗಂಡು ಸಿದ್ಧತೆ ಪೂರ್ಣಗೊಳಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಸಂತ್ರಸ್ತರ ಶಿಬಿರಗಳನ್ನು ನಡೆಸುವ ನಿಟ್ಟಿನಲ್ಲಿ ಪಿಡುಗು ನಿವಾರಣೆ ಪ್ರಾಧಿಕಾರವು ಆರೆಂಜ್ ಬುಕ್ 2021ರಲ್ಲಿ ನಮೂದಿಸಿರುವ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ.
ಸಾರ್ವಜನಿಕರಿಗೆ ನೀಡಲಾಗುವ ಸಲಹೆಗಳು :
1. ಬಿರುಸಿನ ಮಳೆಯ ಮುನ್ನೆಚ್ಚರಿಕೆ ನೀಡಲಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತಿಳಿಸುವ ಸಲಹೆಗಳನ್ನು ಪಾಲಿಸಿ ಅಪಾಯ ಸಾಧ್ಯತೆಗಳ ಪ್ರದೇಶಗಳಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರ ಗೊಳಿಸುವ ಕಾಯಕಗಳೊಂದಿಗೆ ಸಹಕರಿಸಬೇಕು. ವಿವಿಧೆಡೆ ಕಡಲ್ಕೊರೆತ ಸಾಧ್ಯತೆ ಪ್ರದೇಶಗಳಲ್ಲಿ ಅತೀವ ಜಾಗ್ರತೆ ಪಾಲಿಸಬೇಕು. ಅನಿವಾರ್ಯ ಹಂತಗಳಲ್ಲಿ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಗೊಳ್ಳಬೇಕು. ಮೀನುಗಾರಿಕೆ ಉಪಕರಣಗಳನ್ನು ಜಾಗರೂಕವಾಗಿ ಇರಿಸಿಕೊಳ್ಳಬೇಕು.
2.ಸುದೃಡವಲ್ಲದ ಮನೆಗಳಲ್ಲಿ ವಾಸಿಸುವವರು ಈ ದಿನಗಳಲ್ಲಿ ಬೇರೆಡೆ ಸ್ಥಳಾಂತರಗೊಳ್ಳಬೇಕು.
3. ಸಾರ್ವಜನಿಕ, ಖಾಸಗಿ ಪ್ರದೇಶಗಳಲ್ಲಿ ಅಪಾಯಕಾರಿ ರೂಪದಲ್ಲಿರುವ ಮರ/ ಕಂಭ/ಫಲಕ ಇತ್ಯಾದಿಗಳನ್ನು ಸುರಕ್ಷಿತಗೊಳಿಸಬೇಕು. ಅಪಾಯ ಸಾಧ್ಯತೆಗಳ ಕುರಿತು ಅಧಿಕಾರಿಗಳಿಗೆ ಮುಂಗಡವಾಗಿ ಮಾಹಿತಿ ನೀಡಬೇಕು.
3. ಸಂತ್ರಸ್ತರ ಶಿಬಿರಗಳಿಗೆ ಸ್ಥಳಾಂತರಗೊಳ್ಳಬೇಕಾದ ಹಂತಗಳಲ್ಲಿ ಕೋವಿಡ್ ಸಂಹಿತೆಗಳನ್ನು ಪೂರ್ಣರೂಪದಲ್ಲಿ ಪಾಲಿಸಬೇಕು.
4. ಬಿರುಸಿನ ಮಳೆಯ ಸಾಧ್ಯತೆಗಳ ಹಿನ್ನೆಲೆಯಲ್ಲಿ ನದಿ ದಾಟುವ, ಜಲಶಯಗಳಲ್ಲಿ ಸ್ನಾನಕ್ಕಿಳಿಯುವ, ಮೀನು ಹಿಡಿಯುವ ಕ್ರಮ ನಡೆಸಕೂಡದು. ಸೆಲ್ಪಿ ಕ್ಲಿಕ್ಕಿಸುವ ನಿಟ್ಟಿನಲ್ಲಿ ಗುಂಪು ಸೇರಕೂಡದು.
5. ಅಣೆಕಟ್ಟುಗಳ ಕೆಳಸ್ತರಗಳಲ್ಲಿ ವಾಸಿಸುತ್ತಿರುವವರು ಅಣೆಕಟ್ಟಿನಿಂದ ನೀರು ಹೊರಬರುವ ಸಾಧ್ಯತೆಗಳನ್ನು ಮುಂಗಡವಾಗಿ ಗಮನಿಸಿ ಸಿದ್ಧತೆ ನಡೆಸಬೇಕು ಮತ್ತು ಅನಿವಾರ್ಯವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಆದೇಶ ಪ್ರಕಾರ ಸುರಕ್ಷಿತ ತಾಣಗಳಿಗೆ ಸ್ಥಳಾಂತರಗೊಳ್ಳಬೇಕು.
6. ಮಲೆನಾಡ ಪ್ರದೇಶಗಳಲ್ಲಿ ರಾತ್ರಿ ವೇಳೆಯ ಸಂಚಾರ ಕೈಬಿಡಬೇಕು.
7. ಬಿರುಸಿನ ಗಾಳಿಗೆ ಮರಗಳು ಬುಡ ಕಳಚಿಕೊಂಡು ಬಿದ್ದು, ವಿದ್ಯುತ್ ಕಂಭಗಳು ಉರುಳಿ ನಡೆಯಬಹುದಾದ ಸಾಧ್ಯತೆಗಳನ್ನು ಮುಂಗಡವಾಗಿ ಗಮನಿಸಬೇಕು.