ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಕಾಳಜಿ ಮುಂದುವರಿದಿರುವಂತೆ ರಾಜ್ಯ ಸರ್ಕಾರ ಹೆಚ್ಚಿನ ರಿಯಾಯಿತಿಗಳನ್ನು ಘೋಷಿಸಿದೆ. ಶನಿವಾರ ಮತ್ತು ಭಾನುವಾರ ಕಟ್ಟುನಿಟ್ಟಿನ ನಿಬರ್ಂಧಗಳು ಜಾರಿಯಲ್ಲಿವೆ. ದೈನಂದಿನ ಪ್ರಕರಣಗಳಲ್ಲಿ ಇಳಿಕೆಯ ಹೊರತಾಗಿಯೂ ಸಾವಿನ ಪ್ರಮಾಣವನ್ನು ನಿಯಂತ್ರಿಸಲಾಗದ ಕಾರಣ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ಬಿಗಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಲಾಕ್ ಡೌನ್ ಜೂನ್ 16 ಕ್ಕೆ ವಿಸ್ತರಿಸಲಾಗಿದೆ. ಕೋವಿಡ್ ವಿಸ್ತರಣೆಯು ನಿರೀಕ್ಷೆಗಳಿಂದ ಕಡಿಮೆಯಾಗದಿದ್ದರೆ ಪ್ರಸ್ತುತ ಲಾಕ್-ಡೌನ್ ನಿರ್ಬಂಧಗಳನ್ನು ಜೂನ್ 16 ರವರೆಗೆ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಈ ಹಿಂದೆ ತಿಳಿಸಿತ್ತು.
ಶನಿವಾರ ಮತ್ತು ಭಾನುವಾರ ಕಟ್ಟುನಿಟ್ಟಿನ ನಿಯಂತ್ರಣ:
ದೈನಂದಿನ ಕೋವಿಡ್ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶನಿವಾರ ಮತ್ತು ಭಾನುವಾರ ಹೊಸ ಲಾಕ್‍ಡೌನ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ದಿನಗಳಲ್ಲಿ ಹೋಟೆಲ್‍ಗಳಿಂದ ಆನ್‍ಲೈನ್ ವಿತರಣೆಗೆ ಮಾತ್ರ ಅನುಮತಿಸಲಾಗಿದೆ. ಯಾವುದೇ ಪಾರ್ಸೆಲ್ ಅಥವಾ ಟೇಕ್ ಅವೇ ವ್ಯವಸ್ಥೆಗಳಿರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳು ಜಾರಿಯಲ್ಲಿದ್ದು ಪೆÇ್ರೀಟೋಕಾಲ್ ನ್ನು ಅನುಸರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೋವಿಡ್ ಪರಿಶೀಲನಾ ಸಭೆಯಲ್ಲಿ ಜೂನ್ 12 ಮತ್ತು 13 ರಂದು ಕಟ್ಟುನಿಟ್ಟಿನ ನಿಬರ್ಂಧಗಳೊಂದಿಗೆ ಸಂಪೂರ್ಣ ಲಾಕ್ ಡೌನ್ ಇದೆ ಎಂದು ಹೇಳಿದ್ದರು.
ಅಂಗಡಿಗಳನ್ನು ತೆರೆಯಲು ಅನುಮತಿ:
ಕೋವಿಡ್ ಮಾರ್ಗಸೂಚಿಗಳು ಚಾಲ್ತಿಯಲ್ಲಿರುವಾಗ ಮೊಬೈಲ್ ಪೋನ್ ದುರಸ್ಥಿ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗಿದೆ. ಶನಿವಾರ ಮತ್ತು ಭಾನುವಾರ ಸಾಮಾಜಿಕ ಅಂತರ ಇರುವ ನಿರ್ಮಾಣ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಿಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆಯಾ ಪ್ರದೇಶಗಳ ಪೋಲೀಸ್ ಠಾಣೆಗಳಿಂದ ಪಡೆಯಬೇಕು. ಕೋವಿಡ್ ಪೆÇ್ರೀಟೋಕಾಲ್ ನ್ನು ಅನುಸರಿಸಬೇಕೆಂದು ಸಹ ಶಿಫಾರಸು ಮಾಡಲಾಗಿದೆ. ಏತನ್ಮಧ್ಯೆ, ಜೂನ್ 11 ರ ಶುಕ್ರವಾರದಂದು ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗಿದೆ. ಸ್ಟೇಷನರಿ, ಆಭರಣಗಳು, ಪಾದರಕ್ಷೆಗಳ ಶೋ ರೂಂಗಳು, ಬಟ್ಟೆ ಅಂಗಡಿಗಳು ಮತ್ತು ಆಪ್ಟಿಕಲ್‍ಗಳಂತಹ ಅಂಗಡಿಗಳಿಗೆ ಜೂನ್ 11 ರಂದು(ಇಂದು) ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಒಂದು ದಿನ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ನಿರ್ವಹಣೆ ಕಾರ್ಯಗಳಿಗಾಗಿ ಇಂದು ಮಾತ್ರ ಆಟೋ ಶೋ ರೂಂಗಳನ್ನು ತೆರೆಯಬಹುದಾಗಿದೆ. ಇತರ ಚಟುವಟಿಕೆಗಳು ಮತ್ತು ಮಾರಾಟಗಳನ್ನು ಅನುಮತಿಸಲಾಗುವುದಿಲ್ಲ.
ಸಂಬಂಧಿತ ಸಕಾರಾತ್ಮಕ ದರ:
ರಾಜ್ಯದಲ್ಲಿ ಲಾಕ್ ಡೌನ್ ನ್ನು ಜೂನ್ 16 ಕ್ಕೆ ಈಗಾಗಲೇ ವಿಸ್ತರಿಸಲಾಗಿದೆ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾದಂತೆ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆಯಿದೆ ಆದರೆ ಸಕಾರಾತ್ಮಕತೆ ಪ್ರಮಾಣವು ಕಡಿಮೆಯಾಗಿಲ್ಲ. ಪರೀಕ್ಷಾ ಸಕಾರಾತ್ಮಕÀತೆಯು ಶೇಕಡಾ 10 ಕ್ಕಿಂತ ಕಡಿಮೆಯಿದ್ದರೆ ಮಾತ್ರ ಲಾಕ್‍ಡೌನ್ ನ್ನು ಹಿಂಪಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬಿಗಿಯಾದ ನಿಯಂತ್ರಣಗಳ ಹೊರತಾಗಿಯೂ ರಾಜ್ಯದಲ್ಲಿ ಪರೀಕ್ಷಾ ಧನಾತ್ಮಕ ಸಕಾರಾತ್ಮಕ ಪ್ರಮಾಣ 13.45 ಎಂದು ಆರೋಗ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆತಂಕ ತಂದ ಕೋವಿಡ್ ಸಾವಿನ ತೀವ್ರತೆ:
ನಿನ್ನೆ ರಾಜ್ಯದಲ್ಲಿ 14,424 ಮಂದಿ ಜನರಿಗೆ ಸೋಂಕು ದೃಢಪಟ್ಟಿತ್ತು. ಆದರೆ 194 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸಾವುಗಳ ಸಂಖ್ಯೆ 10,631 ಕ್ಕೆ ಏರಿಕೆಯಾಗಿದೆ. 1,35,298 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 25,42,242 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 5,80,417 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ.