ಸಮರಸ ಚಿತ್ರ ಸುದ್ದಿ: ಉಪ್ಪಳ: ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ನೇಶನಲ್ ಮೀನ್ಸ್ ಕಂ ಮೆರಿಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಸ್ಕಾಲರ್‍ಶಿಪ್ ಗೆ ಅರ್ಹಳಾದ ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಪೈವಳಿಕೆ ಏದಾರು ನಿವಾಸಿ ನಾರಾಯಣ - ಶೈಲಜ ದಂಪತಿ ಸುಪುತ್ರಿ ಧನ್ಯಶ್ರೀ ಎನ್ ಎಸ್ ಅವಳನ್ನು ಮನೆಗೆ ತೆರಳಿ ಶಾಲು ಹೊದೆಸಿ, ಫಲವಸ್ತು, ಸ್ಮರಣಿಕೆ, ಪದಕ, ಕಲಿಕೋಪಕರಣ ಕಿಟ್ ನೀಡಿ ಗೌರವಿಸಲಾಯಿತು. ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ, ರವೀಂದ್ರನಾಥ್ ಕೆ ಆರ್, ಪ್ರವೀಣ್ ಕನಿಯಾಲ, ಪುಷ್ಪಲತ ಕೆ.ವಿ, ಸಂಜೀವ ಚೆಂಬ್ರಕಾನ, ಚಂದ್ರಶೇಖರ ಡಿ ಉಪಸ್ಥಿತರಿದ್ದರು.