ಕಾಸರಗೋಡು: ಮಳೆಗಾಲಕ್ಕೆ ಮುನ್ನ ನಡೆಸಬೇಕಾದ ಶುಚೀಕರಣಗಳೊಂದಿಗೆ ಕಾಸರಗೋಡು ಜಿಲ್ಲಾ ಶುಚಿತ್ವ ಮಿಷನ್ ಕಣದಲ್ಲಿದೆ.
ಇದರ ಅಂಗವಾಗಿ ಸ್ಥಳೀಯಾಡಳಿತ ಇಲಾಖೆಯ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಕರದೊಂದಿಗೆ ಜನಪರ ಶುಚೀಕರಣ ಕಾರ್ಯಕ್ರಮಗಳು ನಡೆಯಲಿವೆ. ಈ ಸಲುವಾಗಿ ಜೂ.5ರಂದು ಸಾರ್ವಜನಿಕ ಪ್ರದೇಶಗಳ, ಜೂ.6ರಂದು ಮನೆಗಳ ಮಟ್ಟದ ಶುಚೀಕರಣ ನಡೆಯಲಿವೆ.
ಪರಿಸರ ದಿನಾಚರಣೆಯಂದು(ಜೂ.5) ಕಾಸರಗೋಡು ಸಿವಿಲ್ ಸ್ಟೇಷನ್ ಆವರಣದಲ್ಲಿ ಮರವಾಗಿ ಬೆಳೆಯಬಲ್ಲ ಸಸಿ ನೆಡುವ ಮೂಲಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಯೋಜನೆ ಉದ್ಘಾಟಿಸುವರು.
ಇದರ ಅಂಗವಾಗಿ "ಮಳೆಗಾಲಕ್ಕೆ ಸಿದ್ಧತೆ" ಎಂಬ ಹೆಸರಿನಲ್ಲಿ ಸೆಲ್ಫಿ ಫೆÇಟೋಗ್ರಫಿ ಸ್ಪರ್ಧೆ ಜರುಗಲಿದೆ. ಇದರಲ್ಲಿ ಸ್ಪರ್ಧಿಸುವ ಆಸಕ್ತರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಯಾವರಣದಲ್ಲಿ ಶುಚೀಕರಣ ನಡೆಸುವ ಮತ್ತು ಮರವಾಗಿ ಬೆಳೆಯಬಲ್ಲ ಸಸಿ ನೆಡುವ ಫೆÇಟೋ ಕ್ಲಿಕ್ಕಿಸಿ(ಸೆಲ್ಫಿ) 9633813913, 9446958519 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಕಳುಹಿಸಬೇಕು. ಆಯ್ಕೆಗೊಂಡ ಫೆÇಟೋಗಳಿಗೆ ಆಕರ್ಷಕ ಬಹುಮಾನಗಳು ಲಭಿಸಲಿವೆ.