ತಿರುವನಂತಪುರ: ಸುಳ್ಳು ಆಪಾದನೆಗಳ ಮೂಲಕ ನಾಯಕರ ವಿರುದ್ದ ದೋಷಾರೋಪಗಳನ್ನು ಮಾಡುವುದರಿಂದ ಪಕದ ವರ್ಚಸ್ಸ್ಷು ಕುಸಿಯುತ್ತದೆ ಎಂದು ಕನಸು ಕಾಣಬಾರದು ಎಂದು ಬಿಜೆಪಿ ಮುಖಂಡ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ. ಪಕ್ಷದ ನಾಯಕರು ಮತ್ತು ಪಕ್ಷವನ್ನು ಅಪಖ್ಯಾತಿಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯನ್ನು ಅವರು ಉದ್ಘಾಟಿಸಿದರು.
ಬಿಜೆಪಿಯನ್ನು ಸಿದ್ಧಾಂತ ಮತ್ತು ಆದರ್ಶಗಳನ್ನು ಎದುರಿಸಲು ಸಾಧ್ಯವಿಲ್ಲ. ಕೆ ಸುರೇಂದ್ರನ್ ಅವರ ಹಿಂದೆ ಇರುವ ಎಲ್ಲ ಕಾರ್ಯಕರ್ತರು ಬಂಡೆಯಂತೆ ದೃಢವಾಗಿ ಗೊಂದಲಗಳಿಲ್ಲದೆ ಸಂಘಟಿತರಾಗಿದ್ದು, ಬಂಡೆಯನ್ನು ಪುಡಿಗಟ್ಟಲು ಸುಲಭ ಸಾಧ್ಯ ಅಲ್ಲ ಎಂದು ಅವರು ಹೇಳಿದರು. ಕೋವಿಡ್ ಮಾನದಂಡಗಳನ್ನು ಅನುಸರಿಸಿ ಬಿಜೆಪಿ ರಾಜ್ಯಾದ್ಯಂತ 10,000 ಕೇಂದ್ರಗಳಲ್ಲಿ ನಿನ್ನೆ ಪ್ರತಿಭಟನಾ ಜ್ವಾಲೆಗಳನ್ನು ಆಯೋಜಿಸಿತ್ತು. ಕೆ.ಸುರೇಂದ್ರನ್ ಅವರು ತ್ರಿಶೂರ್‍ನಲ್ಲಿ ಆನ್‍ಲೈನ್‍ನಲ್ಲಿ ಪ್ರತಿಭಟನೆ ಉದ್ಘಾಟಿಸಿದರು.
ಏತನ್ಮಧ್ಯೆ, ಸರ್ಕಾರದ ಮೇಲಿರುವ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ನಾಯಕರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ ಮತ್ತು ಮಟ್ಟಿಲ್ ಅರಣ್ಯ ಲೂಟಿ ಪ್ರಕರಣದಲ್ಲಿ ಸಿಪಿಎಂ ಭಾಗಿಯಾಗಿದೆ ಎಂದು ಕುಮ್ಮನಂ ಹೇಳಿದ್ದಾರೆ. ಕೊಡಕರ ಪ್ರಕರಣದಲ್ಲಿ ಪಕ್ಷದ ಖ್ಯಾತಿಗೆ ಧಕ್ಕೆ ತರಲು ಪಕ್ಷದ ಮುಖಂಡರನ್ನು ಒಬ್ಬೊಬ್ಬರನ್ನಾಗಿ ಆಪಾದನೆಗಳಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದು, ದೊಡ್ಡ ವಂಚನೆಯ ಜಾಲ ಇದರ ಹಿಂದಿದೆ ಎಂದೂ ಕುಮ್ಮನಂ ಹೇಳಿದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಬುಧವಾರ ಪಕ್ಷ ಮನವಿ ಸಲ್ಲಿಸಿ ಆಪಾದನೆಗಳ ಬಗ್ಗೆ ದೂರಿತ್ತು.