ಕಾಸರಗೋಡು: ಕಾಞಂಗಾಡಿನಲ್ಲಿರುವ ಕಾಸರಗೋಡು ಜಿಲ್ಲಾ ಸಕಾರಿ ಆಸ್ಪತ್ರೆ ಎದುರು ಯುವಕಾಂಗ್ರೆಸ್ ಜಿಲ್ಲಾಸಮಿತಿ ವತಿಯಿಂದ ಶನಿವಾರ ಧರಣಿ ನಡೆಯಿತು. ರಾಜ್ಯವನ್ನು ನಡುಗಿಸಿರುವ ಪೆರಿಯ ಕಲ್ಯೋಟ್‍ನ ಯುವಕಾಂಗ್ರೆಸ್ ಕಾಯಕತರಿಬ್ಬರ ಹತ್ಯಾ ಆರೋಪಿಗಳ ಪತ್ನಿಯರಿಗೆ ಆಸ್ಪತ್ರೆಯಲ್ಲಿ ಮಾನದಂಡ ಉಲ್ಲಂಘಿಸಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಒದಗಿಸಿಕೊಟ್ಟಿರುವ ಸಕಾರದ ಕ್ರಮ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಯುವಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರದೀಪ್‍ಕುಮಾರ್ ಧರಣಿ ಉದ್ಘಾಟಿಸಿ ಮಾತನಾಡಿ, ಸಿಪಿಎಂನ ಹಿರಿಯ ಮುಖಂಡರ ಆದೇಶದಂತೆ ಈ ನೇಮಕಾತಿ ನಡೆದಿದ್ದು, ಇದು ಕೊಲೆಗಡುಕರಿಗೆ ಪ್ರೋತ್ಸಾಹ ನೀಡುವ ಕ್ರಮವಾಗಿದೆ ಎಂದು ಆರೋಪಿಸಿದರು. ಜಿಲ್ಲಾ ಪ್ರಧಾನ ಕಾಯದಶಿ ಕಾತಿಕೇಯನ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ. ಕುಞÂಕೃಷ್ಣನ್, ಇಸ್ಮಾಯಿಲ್ ಚಿತ್ತಾರಿ, ಸತ್ಯನಾಥನ್, ಅನೂಪ್ ಕಲ್ಯೋಟ್, ದೀಪುಕೃಷ್ಣನ್, ರಾಹುಲ್‍ಕೃಷ್ಣನ್, ಉಮೇಶ್ ಕಾಟುಕುಳಂಗರ, ನಂದು ಕಲ್ಯೋಟ್, ರೋಹಿತ್, ಸುನೀಶ್ ಮಾವುಂಗಾಲ್ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನಾಕಾರರು ಆಸ್ಪತ್ರೆ ಒಳಗೆ ನುಗ್ಗಲು ಶ್ರಮಿಸುತ್ತಿದ್ದಂತೆ ಪೊಲೀಸರು ಬಲಪ್ರಯೋಗಿಸಿ ಇವರನ್ನು ತೆರವುಗೊಳಿಸಿದರು.