ಬದಿಯಡ್ಕಃ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬದಿಯಡ್ಕ ಸರ್ಕಲ್ ಇನ್ಸ್ಪೆಕ್ಟರ್ ಸಲೀಂ ಸರ್ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಅಧ್ಯಾಪಕ ಸುರಕ್ಷನ್ ನಂಬಿಯಾರ್ ವಹಿಸಿದರು, ಹೈಸ್ಕೂಲ್ ವಿಭಾಗದ ಅಧ್ಯಾಪಕರಾದ ಕೇಶವ ಭಟ್, ಕವಿತಾ, ಶಶಿಧರ ನಂಬಿಯಾರ್, ಕೃಷ್ಣ ಯಾದವ್, ಈಶ್ವರ್ ಭಟ್, ಸೋಮನಾಥ, ವತ್ಸಲ ಟೀಚರ್, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ನಿರಂಜನ್ ರೈ ಪೆರಡಾಲ ವಂದಿಸಿದರು.