ಕಾಸರಗೋಡು: ಲಾಕ್‍ಡೌನ್ ವ್ಯವಸ್ಥೆಯಲ್ಲಿ ಸರ್ಕಾರ ಕೆಲವೊಂದು ರಿಯಾಯಿತಿ ಘೋಷಿಸುತ್ತಿದ್ದಂತೆ ಕಾಸರಗೋಡು ಜಿಲ್ಲೆಯ ಸಾರಿಗೆ ಹಾಗೂ ಮಾರುಕಟ್ಟೆಯಲ್ಲಿ ಉತ್ತೇಜನ ಕಂಡುಕೊಳ್ಳಲಾರಂಭಿಸಿದೆ.
ಕಾಸರಗೋಡು ನಗರದಲ್ಲಿ ಬೆಳಗ್ಗಿನಿಂದಲೇ ಜನಸಂಚಾರ ಕಂಡುಬರಲಾರಂಭಿಸಿದೆ. ಕೆಎಸ್ಸಾರ್ಟಿಸಿ ಕಾಸರಗೋಡು ಡಿಪೋದಿಂದ ಗುರುವಾರ 32ಬಸ್‍ಗಳು ಸಂಚಾರ ಆರಂಭಿಸಿದೆ. ಇದರಲ್ಲಿ ಅಂತರ್‍ಜಿಲ್ಲಾ ಸಂಚಾರವೂ ಒಳಗೊಂಡಿದೆ. ದ.ಕ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಗಡಿ ಪ್ರದೇಶದ ವರೆಗೆ ಮಾತ್ರ ಸಂಚಾರ ನಡೆಸುತ್ತಿದೆ. ಕಣ್ಣೂರು, ಕೋಯಿಕ್ಕೋಡ್ ಜಿಲ್ಲೆಗಳಿಗೂ ಕಾಸರಗೋಡು ಡಿಪೋದಿಂದ ಕೆಎಸ್ಸಾರ್ಟಿಸಿ ಬಸ್‍ಗಳು ಸಂಚಾರ ನಡೆಸಿದೆ. ಕೋವಿಡ್ ಮಾನದಂಡ ಪಾಲಿಸಿಕೊಂಡು ಬಸ್‍ಗಳು ಸಂಚಾರ ನಡೆಸುತ್ತಿದೆ. ಖಾಸಗಿ ಬಸ್‍ಗಳು ರಸ್ತೆಗಿಳಿದಿಲ್ಲ. ಕಾಸರಗೋಡು ನಗರದಲ್ಲಿ ಕೆಲವೊಂದು ಅಂಗಡಿಗಳು ತೆರೆದು ಕಾರ್ಯಾಚರಿಸಿತು.