ಬದಿಯಡ್ಕ: ಪೆರಡಾಲ ಸರ್ಕಾರಿ ಪ್ರೌಢಶಾಲೆಯ ಪ್ರವೇಶೋತ್ಸವ ಸಮಾರಂಭ ಗೂಗಲ್ ಮೀಟ್ ಮೂಲಕ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ರಾಜಗೋಪಾಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಯಲತಾ ಹಾಗೂ ಬಿಂದಿಯಾ ಮುಖ್ಯಮಂತ್ರಿಗಳ ಸಂದೇಶವನ್ನು ಮಂಡಿಸಿದರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಶುಭಕೋರಿದರು. ವಾರ್ಡ್ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್ ಹಿತನುಡಿಗಳನ್ನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಡುವನ್ ಕುಂಞÂ ಶುಭಾಶಂಸನೆಗೈದರು. ಅಧ್ಯಾಪಿಕೆ ದಿವ್ಯಗಂಗಾ ಶುಭಕೋರಿದರು. ನೌಕರ ಸಂಘದ ಕಾರ್ಯದರ್ಶಿ ರಿಶಾದ್ ಪಿ.ಎಂ. ಸ್ವಾಗತಿಸಿ, ಶ್ರೀಧರ ಭಟ್ ವಂದಿಸಿದರು. ಶ್ರೀಧರನ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಎ.ಎನ್. ಸಂಯೋಜನೆ ಮಾಡಿದರು. ಮನೆಯಿಂದಲೇ ಮಕ್ಕಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮನೆಯನ್ನೇ ಅಲಂಕರಿಸಿ, ಸಿಹಿತಿಂಡಿ ಮಾಡಿ, ಗಿಡನೆಟ್ಟು ಪ್ರವೇಶೋತ್ಸವವನ್ನು ಆಚರಿಸಲಾಯಿತು.