ಕುಂಬಳೆ: ಕುಂಬಳೆಯ ಸ್ಪಂದನ ತಂಡದಿಂದ ಎಂಟು ಎಕ್ರೆ ಪ್ರದೇಶದಲ್ಲಿ ನಡೆಸಲಿರುವ ಭತ್ತದ ಕೃಷಿಗೆ ದಾಮೋದರ ಆರಿಕ್ಕಾಡಿ ನೇತೃತ್ವದಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಯಿರ ಯೂಸುಫ್ ಕಾಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪಂಚಾಯತಿ ಸದಸ್ಯ ಅಬ್ದುಲ್ ರೆಹಮಾನ್ ಭಾಗವಹಿಸಿ ಎಲ್ಲಾ ವಿಧದ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸ್ಪಂದನ ಕುಂಬಳೆ ಇದರ ರೂವಾರಿ ನ್ಯಾಯವಾದಿ ಉದಯ್ ಕುಮಾರ್ ಸ್ವಾಗತಿಸಿ, ಲಕ್ಷ್ಮಣ್ ಪ್ರಭು ಕುಂಬಳೆ ವಂದಿಸಿದರು. ಸ್ಪಂದನ ಕುಂಬಳೆ ಇದರ ಸದಸ್ಯರು ಮತ್ತು ಪರಿಸರವಾಸಿಗಳು ಸಹಕಾರವಿತ್ತರು.