ತಿರುವನಂತಪುರ: ಲಾಕ್ ಡೌನ್ ಮರೆಯಲ್ಲಿ ಡ್ರಗ್ ವ್ಯಾಪಾರ ಮಾಡುತ್ತಿದ್ದ ಆಸ್ಪತ್ರೆಯನ್ನು ಪೋಲೀಸರು ಮುಚ್ಚಿದ್ದಾರೆ. ತಿರುವನಂತಪುರ ಕಾರಾಟ್ ಜಂಕ್ಷನ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯನ್ನು ಮುಚ್ಚಲಾಯಿತು. ಕಿಲಿಮನೂರ್ ಮತ್ತು ಸುತ್ತಮುತ್ತ ಮದ್ಯದ ವಾಸನೆಯೊಂದಿಗೆ ಆಯುರ್ವೇದ ಔಷಧದ ಬಳಕೆ ವ್ಯಾಪಕವಾಗಿ ಹರಡಿತ್ತು. ಆಸ್ಪತ್ರೆಯಿಂದ ಸುಮಾರು 50 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ವೈದ್ಯರ ಪ್ರಿಸ್ಕ್ರಿಪ್ಷನ್ ಅಥವಾ ಮಾಹಿತಿಯಿಲ್ಲದೆ ಮಾರಾಟ ಮಾಡಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಮಾಲೀಕ ಪ್ರೇಮ್‍ಲಾಲ್ ಮತ್ತು ಉದ್ಯೋಗಿ ಸತ್ಯಶೀಲನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗ್ರಾಮೀಣ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ದೊರೆತ ಗುಪ್ತಚರ ಮಾಹಿತಿ ಆಧಾರದ ಮೇಲೆ ಕಿಲ್ಲಿಮನೂರ್ ಪೋಲೀಸರು ಅಟ್ಟಿಂಗಲ್ ಡಿಎಸ್ಪಿ ಸಿಎಸ್ ಹರಿ ಅವರ ಸೂಚನೆಯ ಮೇರೆಗೆ ವಿವಿಧ ಸಂಸ್ಥೆಗಳಲ್ಲಿ ದಾಳಿ ನಡೆಸುತ್ತಿದ್ದರು.
ಕಿಲಿಮನೂರ್ ಪ್ರದೇಶದಲ್ಲಿ ಮದ್ಯವ್ಯಸನಿಗಳಿಂದ ವ್ಯಾಪಕ ಸಾಮಾಜಿಕ ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪೋಲೀಸರು ವಿವಿಧ ಪ್ರದೇಶಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ. ಆಸ್ಪತ್ರೆಯ ಮುಂದೆ ಯುವಕರ ಗುಂಪು ಗಮನಾರ್ಹ ಮಟ್ಟದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ಗಮನ ಕೇಂದ್ರೀಕರಿಸಲಾಗಿತ್ತು. ಅಂತಿಮವಾಗಿ, ರಹಸ್ಯವಾಗಿ ದೊರಕಿದ ಮಾಹಿತಿ ಆಧಾರದಲ್ಲಿ ಏಕಾಏಕಿ ಪೋಲೀಸರು ದಾಳಿ ನಡೆಸಿ ಅಕ್ರಮ ಪತ್ತೆಹಚ್ಚಿದರು.
ಕಿಲಿಮನೂರ್ ಐಎಸ್.ಎಸ್ ಸಾನುಜ್, ಎಎಸ್ ಐ ಗÀಳಾದ ಜಯೇಶ್ ಮತ್ತು ಶಾಜಿ ಟಿಕೆ, ತಾಜುದ್ದೀನ್ ಮತ್ತು ಸಿಪಿಒಗಳಾದ ರಂಜಿತ್ ರಾಜ್, ರಿಯಾಸ್ ಮತ್ತು ಗಾಯತ್ರಿ ಈ ದಾಳಿಯ ನೇತೃತ್ವ ವಹಿಸಿದ್ದರು.