ನವದೆಹಲಿ: ದೇಶದಲ್ಲಿ ಸಾಂಕ್ರಾಮಿಕ ರೋಗ ಕೋವಿಡ್ ಎರಡನೇ ಅಲೆಗೆ ಡೆಲ್ಟಾ ರೂಪಾಂತರಿ ಕಾರಣವಾಗಿತ್ತು. ಇದರ ಬೆನ್ನಲ್ಲೇ ಡೆಲ್ಟಾ ಪ್ಲಸ್ ಅಥವಾ ಎವೈ.1 ಎಂಬ ರೂಪಾಂತರಿ ತಳಿ ಪತ್ತೆಯಾಗಿದೆ. ಆದರೆ ಸದ್ಯದ ಮಟ್ಟಿಗೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಡೆಲ್ಟಾ ಅಥವಾ ಬಿ .1.617.2 ರೂಪಾಂತರಿ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು ಇದ ಕೊರೋನಾ ಎರಡನೇ ಅಲೆಗೆ ಕಾರಣವಾಗಿತ್ತು. ಹೊಸ ರೂಪಾಂತರದಿಂದಾಗಿ ರೋಗದ ತೀವ್ರತೆಯ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲವಾದರೂ ಭಾರತದಲ್ಲಿ ಇತ್ತೀಚೆಗೆ ಅನುಮೋದನೆ ಪಡೆದ ಆಂಟಿಬಾಡಿ ಕಾಕ್ಟೈಲ್ ಮೊನೊಕ್ಲೋನಲ್ ಕೊರೋನಾ ವೈರಸ್ ಡೆಲ್ಟಾ ಪ್ಲಸ್ ನಿರೋಧಕವಾಗಿದೆ.ಹೊಸ ರೂಪಾಂತರವು ಸಾರ್ಕ್-ಕೋವ್-2 ನ ಸ್ಪೈಕ್ ಪ್ರೋಟೀನ್‌ನಲ್ಲಿದೆ. ಇದು ವೈರಸ್ ಮಾನವ ಜೀವಕೋಶಗಳಿಗೆ ಪ್ರವೇಶಿಸಲು ಮತ್ತು ಸೋಂಕು ತಗಲುವಂತೆ ಮಾಡುತ್ತದೆ ಎಂದು ದೆಹಲಿ ಸಿಎಸ್‌ಐಆರ್ ಜೆನೋಮಿಕ್ ಇನ್ಸ್ ಟಿಟ್ಯೂಟ್ ನ ತಜ್ಞ ವಿನೋದ್ ಸ್ಕಾರಿಯಾ ಹೇಳಿದ್ದಾರೆ.
63 ಜೆನೋಮ್(ಬಿ.1.617.2) ಹೊಸ ತಳಿ ಕೆ417ಎನ್ ಕಾಣಿಸಿಕೊಂಡಿರುವುದಾಗಿ ಬ್ರಿಟನ್ ಆರೋಗ್ಯ ಇಲಾಖೆ ಕೂಡ ತಿಳಿಸಿದೆ. ಇದು ಭಾರತದಲ್ಲಿ ಜೂನ್ 7ರಂದು ಕಾಣಿಸಿಕೊಂಡಿದ್ದು ಭಾರತದಲ್ಲಿ ಹೆಚ್ಚಾಗಿ ಸೋಂಕಿತರಲ್ಲಿ ಕಂಡುಬಂದಿಲ್ಲ. ಆದರೆ ಯುರೋಪ್, ಏಷ್ಯಾ ಹಾಗೂ ಅಮೆರಿಕಾದಲ್ಲಿ ಈ ರೂಪಾಂತರಿ ಪತ್ತೆಯಾಗಿದೆ.
ಮೊನೊಕ್ಲೋನಲ್ ಪ್ರತಿಕಾಯಗಳಾದ ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್ಗಳಿಗೆ ಪ್ರತಿರೋಧವನ್ನು ಸೂಚಿಸಿರುವ ನಿದರ್ಶನಗಳಿವೆ. ಈ ಕಾಕ್ಟೈಲ್ ಇತ್ತೀಚೆಗೆ ಭಾರತದಲ್ಲಿ ತುರ್ತು ಬಳಕೆಗಾಗಿ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಥೆಯಿಂದ ಅನುಮೋದನೆ ಪಡೆದುಕೊಂಡಿದೆ. ಡ್ರಗ್ ಸಂಸ್ಥೆಗಳಾದ ರೋಚೆ ಇಂಡಿಯಾ ಮತ್ತು ಸಿಪ್ಲಾಸ್ ಆಂಟಿಬಾಡಿ ಕಾಕ್ಟೈಲ್‌ಗೆ ಪ್ರತಿ ಡೋಸ್‌ಗೆ 59,750 ರೂ. ನಿಗದಿ ಮಾಡಿದೆ.