ತಿರುವನಂತಪುರ:ಕೋವಿಡ್ ನಿಯಂತ್ರಣಗಳ ಭಾಗವಾಗಿ ಮುಂದೂಡಲ್ಪಟ್ಟ ಶ್ರೀಶಕ್ತಿ 259, ಅಕ್ಷಯ 496, ಕಾರುಣ್ಯ ಪ್ಲಸ್ 367, ನಿರ್ಮಲ್ 223, ವಿನ್ವಿನ್ 615, ದೃಶಕ್ತಿ 260, ಅಕ್ಷಯ 497, ಭಾಗ್ಯಮಿತ್ರ-ಬಿಎಂ 6 ಮತ್ತು ಲೈಫ್ ವಿಶು ಬಂಪರ್-ಬಿಆರ್ 79 ರ ಡ್ರಾ ಕ್ರಮವಾಗಿ ಜೂನ್ 25, 29, ಜುಲೈ 2,6, 9, 13, 16, 20, 22 ರ ದಿನಾಂಕಗಳಂದು ನಡೆಯಲಿದೆ.
ಮುಂದೂಡಲ್ಪಟ್ಟ ಸಾಪ್ತಾಹಿಕ ಲಾಟರಿ ಡ್ರಾ ಪೂರ್ಣಗೊಂಡ ಬಳಿಕ ಕೋವಿಡ್ ಸಂದರ್ಭಗಳನ್ನು ಗಮನಿಸಿ ಹೊಸ ಸಾಪ್ತಾಹಿಕ ಲಾಟರಿ ಡ್ರಾವನ್ನು ಪ್ರಾರಂಭಿಸಲಾಗುವುದು. ಲಾಟರಿಗಳ ಸಂಖ್ಯೆ ಮತ್ತು ದಿನಾಂಕಗಳಂತಹ ವಿವರಗಳನ್ನು ನಂತರ ನಿರ್ಧರಿಸಲಾಗುತ್ತದೆ.
ಲಾಕ್‍ಡೌನ್‍ನಲ್ಲಿ ರಿಯಾಯಿತಿ ಜಾರಿಬಂದಲ್ಲಿ ಇಂದಿನಿಂದಲೇ ಲಾಟರಿ ಮಾರಾಟ ಲಾಟರಿ ಕಚೇರಿಗಳಲ್ಲಿ ಪುನರಾರಂಭಗೊಳ್ಳಲಿದೆ. ಸರ್ಕಾರದ ನಿರ್ದೇಶನದಂತೆ ಕಚೇರಿಗಳಲ್ಲಿ ನೌಕರರ ಸಂಖ್ಯೆ ಸೀಮಿತವಾಗಿರುತ್ತದೆ.