ಕಾಸರಗೋಡು: "ಕಾಸರಗೋಡು ಬಹುಭಾಷೆ ಮತ್ತು ಸಂಸ್ಕøತಿಗೆ ನೆಲೆವೀಡಾಗಿದ್ದು ಈ ಭಾಷೆಗಳೊಳಗೆ ಪರಸ್ಪರ ಸಾಮರಸ್ಯದ ಸಂಬಂಧವಿದೆ. ಭಾಷೆಗಳ ನಡುವೆ ಪರಸ್ಪರ ಕೊಡುಕೊಳ್ಳುವಿಕೆಯು ಕೊರೋನಾ ವೈರಸ್ ಹರಡುವಂತೆ ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಕಾಸರಗೋಡಿನ ಬಹುಭಾಷೆ ಬಹುಸಂಸ್ಕøತಿಯ ಅಧ್ಯಯನಕ್ಕೆ ಕೇಂದ್ರೀಯ ವಿವಿ ಯ ಕನ್ನಡ ವಿಭಾಗವು ಶಕ್ತಿಯಾಗಬೇಕು" ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟರ್ ಇನ್ ಚಾರ್ಜ್ ಡಾ.ರಾಜೇಂದ್ರ ಪಿಲಾಂಕಟ್ಟೆ ಅಭಿಪ್ರಾಯಪಟ್ಟರು.
ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಶನಿವಾರ ಸಂಜೆ ಆಯೋಜಿಸಿದ 'ಸಾಹಿತ್ಯಯಾನ' ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ನನ್ನ ಬಾಲ್ಯದಲ್ಲಿ ಕಾಸರಗೋಡಿನಲ್ಲಿ ಕನ್ನಡ ಭಾಷೆಯು ಬಹಳ ದಟ್ಟವಾಗಿ ಹಬ್ಬಿತ್ತು. ಆದರೆ ದಿನಕಳೆದಂತೆ ಕನ್ನಡ ಕಲಿಯುವ ವಾತಾವರಣವು ದೂರವಾಗುತ್ತಾ ಬಂತು. ಮಲಯಾಳ ಭಾಷೆಯ ಕಲಿಕೆಗೆ ಸಿಗುತ್ತಿರುವ ಮಹತ್ವವು ಕನ್ನಡದ ಕಲಿಕೆಗೆ ದೊರಕದೇ ಇರುವುದು ಖೇದಕರ ಎಂದ ಅವರು ಕಾಸರಗೋಡಿನ ಅನನ್ಯತೆಯನ್ನು ಎತ್ತಿ ಹಿಡಿಯಲು ಕನ್ನಡ ವಿಭಾಗದ ಮೂಲಕ ಶ್ರಮಿಸೋಣ' ಎಂದರು.
ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಮೋಹನ್ ಎ.ಕೆ ಪ್ರಸ್ತಾವಿಕವಾಗಿ ಮಾತನಾಡಿ "ಕನ್ನಡ ಮತ್ತು ಕನ್ನಡ ಸಾಹಿತ್ಯದ ನಂಟು ನನಗೆ ಅಪರೂಪವಾದದ್ದು. ಕನ್ನಡ ನನ್ನ ಪಾಲಿಗೆ ಕೇವಲ ಭಾಷೆಯಲ್ಲ, ಜೀವನ ಎಂದ ಅವರು ಕನ್ನಡ ಕೇವಲ ಭಾಷೆಯಲ್ಲ, ಅದು ಕನ್ನಡಿಗರ ಬದುಕು ಎಂಬುದಾಗಿ ಅಭಿಪ್ರಾಯಪಟ್ಟರು. ಶಿವರಾಮ ಕಾರಂತರ ಬದುಕು ಬರಹ ತಮಗೆ ನೀಡಿದ ಮಾರ್ಗದರ್ಶನವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡ ಅವರು ಕರ್ನಾಟಕದಿಂದ ಹೊರಗಿರುವ ಕಾಸರಗೋಡಿನ ಕೇಂದ್ರೀಯ ವಿವಿ ಜಗದಗಲ ವ್ಯಾಪಿಸಬೇಕಾದ ಅಗತ್ಯ ಹಾಗೂ ಅನಿವಾರ್ಯತೆಯ ಬಗೆಗೆ ಮಾತನಾಡಿದರು. ಈ ನಿಟ್ಟಿನಲ್ಲಿ ವಿಭಾಗ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ, ಸಂಸ್ಕøತ, ಹಿಂದಿ, ಉರ್ದು ವಿಭಾಗದ ಮುಖ್ಯಸ್ಥೆ ಡಾ. ಶುಭಾ ಮರವಂತೆ ಮಾತನಾಡಿ "ಕನ್ನಡ ಮತ್ತು ಕನ್ನಡತನದ ಪ್ರಜ್ಞೆಯನ್ನು ಯಾವತ್ತೂ ಅದುಬಿಟ್ಟುಕೊಳ್ಳಲಾಗದು. ಅದು ಪ್ರಕಟಗೊಳ್ಳುತ್ತಲೇ ಇರಬೇಕು ಎಂದರು. ಕಾಸರಗೋಡು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯ ಬಗೆಗೆ ಅಭಿಮಾನದಿಂದ ಮಾತನಾಡುತ್ತಾ ದ್ರಾವಿಡ ಭಾಷೆಯು ಮಾತೃ ಸಂಬಂಧದ ಮೂಲಕ ಮಲಯಾಳ ಹಾಗೂ ಕನ್ನಡ ಭಾಷೆಗಳ ಒಗ್ಗೂಡುವಿಕೆಗೆ ಕಾರಣವಾಗಿದೆ ಎಂದರು. ಬಳಿಕ 'ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ' ಎಂಬ ವಿಷಯದ ಬಗೆಗೆ ಉಪನ್ಯಾಸ ನೀಡಿದರು. ಉಪನ್ಯಾಸ ಕಾರ್ಯಕ್ರಮದ ಬಳಿಕ ಸಂವಾದಕ್ಕೆ ಅವಕಾಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವು ಪ್ರಾರಂಭವಾಗಲು ಕಾರಣರಾದ ಮಹನೀಯರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು. ಪ್ರಥಮ ಸ್ನಾತಕೋತ್ತರ ಪzವಿ ವಿದ್ಯಾರ್ಥಿನಿ ಜಯಶ್ರೀ ಪಿ ಸ್ವಾಗತಿಸಿ, ಲತಿಕಾ ವಂದಿಸಿದರು. ನಿಶ್ಮಿತಾ ಇ.ಆರ್ ಕಾರ್ಯಕ್ರಮವನ್ನು ನಿರೂಪಿಸಿದರು.