HEALTH TIPS

ಈ ಸೊಪ್ಪು ನಿಮ್ಮ ಕೇಶರಾಶಿಗೆ ಮಾಡುವುದು ಮ್ಯಾಜಿಕ್!

Top Post Ad

Click to join Samarasasudhi Official Whatsapp Group

Qries

          ಮೊರಿಂಗಾ ಅಥವಾ ಸಾಮಾನ್ಯ ಆಡು ಭಾಷೆಯಲ್ಲಿ ನಾವು ಕರೆಯುವ ನುಗ್ಗೆ ಸೊಪ್ಪಿನಲ್ಲಿ ಉತ್ತಮವಾದ ಪೋಷಕಾಂಶಗಳಿವೆ. ಮುಖ್ಯವಾಗಿ ಮಕ್ಕಳ ಅಪೌಷ್ಟಿಕತೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ನುಗ್ಗೆ ಪುಡಿಯಿಂದ ಕೂದಲಿಗೆ ಎಂತಹ ಪ್ರಯೋಜನ ಇದೆ ಗೊತ್ತಾ? ಇದು ಪ್ರೋಟೀನ್, ಜೀವಸತ್ವಗಳು, ಬೀಟಾ-ಕ್ಯಾರೋಟಿನ್, ಅಮೈನೋ-ಆಮ್ಲಗಳು ಮತ್ತು ವಿವಿಧ ಫೀನಾಲಿಕ್‌ಗಳ ಉತ್ತಮ ಮೂಲವಾಗಿದ್ದು, ಕೂದಲಿಗೆ ಕೆಲವು ಮಾಂತ್ರಿಕ ಪ್ರಯೋಜನಗಳನ್ನು ನೀಡುವುದು. ಅವುಗಳಾವುವು? ಅದನ್ನು ಬಳಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.


              ಆ್ಯಂಟಿಮೈಕ್ರೊಬಿಯಲ್ ಕ್ರಿಯೆ: ಮೊರಿಂಗಾ ಅಥವಾ ನುಗ್ಗೆ ಸೊಪ್ಪಿನಲ್ಲಿ ಪ್ಯಾಟರಿಗೋಸ್ಪೆರ್ಮಿನ್ ಇರುವುದರಿಂದ ಇದು ತಲೆಹೊಟ್ಟು, ನೆತ್ತಿ ತುರಿಕೆ, ಸೋರಿಯಾಸಿಸ್, ಎಸ್ಜಿಮಾ ಮತ್ತು ಬ್ಯಾಕ್ಟೀರಿಯಾದ ಗುಳ್ಳೆಗಳನ್ನು ತಡೆಗಟ್ಟಲು ಸಹಾಯ ಮಾಡುವುದು. ಈ ಮೂಲಕ ಉತ್ತಮವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ-ವಿರೋಧಿಯಾಗಿ ಕಾರ್ಯನಿರ್ವಹಿಸುವುದು.

              ಆ್ಯಂಟಿಮೈಕ್ರೊಬಿಯಲ್ ಕ್ರಿಯೆ: ಮೊರಿಂಗಾ ಅಥವಾ ನುಗ್ಗೆ ಸೊಪ್ಪಿನಲ್ಲಿ ಪ್ಯಾಟರಿಗೋಸ್ಪೆರ್ಮಿನ್ ಇರುವುದರಿಂದ ಇದು ತಲೆಹೊಟ್ಟು, ನೆತ್ತಿ ತುರಿಕೆ, ಸೋರಿಯಾಸಿಸ್, ಎಸ್ಜಿಮಾ ಮತ್ತು ಬ್ಯಾಕ್ಟೀರಿಯಾದ ಗುಳ್ಳೆಗಳನ್ನು ತಡೆಗಟ್ಟಲು ಸಹಾಯ ಮಾಡುವುದು. ಈ ಮೂಲಕ ಉತ್ತಮವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ-ವಿರೋಧಿಯಾಗಿ ಕಾರ್ಯನಿರ್ವಹಿಸುವುದು.



             ಡಿ-ಪಿಗ್ಮೆಂಟೇಶನ್ ನ್ನು ವಿಳಂಬಗೊಳಿಸುವುದು: ನುಗ್ಗೆ ಸೊಪ್ಪು ನಿರ್ದಿಷ್ಟ ಪೆಪ್ಟೈಡ್ ಅನ್ನು ಹೊಂದಿದ್ದು ಅದು ಕೂದಲಿನ ಆಳಕ್ಕೆ ತಲುಪುವುದು. ಅದರ ಬೀಜವು ಕೂದಲಿನ ಅಕಾಲಿಕ ಬಿಳಿಬಣ್ಣವನ್ನು ತಡೆಗಟ್ಟುವಲ್ಲಿ ಹೆಚ್ಚಿನ ಪರಿಣಾಮ ಹೊಂದಿದೆ. ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಇದು ಆ್ಯಂಟಿ-ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ವಿಟಮಿನ್ ಸಿ ಯಲ್ಲಿ ಸ್ವತಂತ್ರ ರಾಡಿಕಲ್ ಇರುವ ಕಾರಣ ಕೂದಲಿನ ಬಣ್ಣಕ್ಕೆ ಮುಖ್ಯವಾದ ಮೆಲನಿನ್ನ್ನು ಕಳೆದುಕೊಳ್ಳುವುದನ್ನು ವಿಳಂಬಗೊಳಿಸುವುದು.


                    ಕೂದಲು ಕೋಶಗಳ ಅಭಿವೃದ್ಧಿ: ನುಗ್ಗೆ ಸೊಪ್ಪಿನಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಇದು ಜೀವಕೋಶಗಳ ಉತ್ಪತ್ತಿಯನ್ನು ಹೆಚ್ಚಿಸುವುದು. ಈ ಮೂಲಕ ಕೂದಲನ್ನು ಪುನರ್ಯೌವನಗೊಳಿಸಲು ಸಹಾಯ ಮಾಡುತ್ತದೆ. ಇದು ಸಣ್ಣ ಕೂದಲಿನ ಕಿರುಚೀಲಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಆ ಮೂಲಕ ಬೋಳು ಪ್ರದೇಶಗಳಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಬಯೋಟಿನ್ ನ ಸಮೃದ್ಧ ಮೂಲವಾಗಿದ್ದು, ನೆತ್ತಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಕೂದಲು ಉದುರುವುದನ್ನು ತಡೆಗಟ್ಟಿ, ಕೂದಲ ಕೋಶಗಳ ಆಯುಷ್ಯವನ್ನು ಹೆಚ್ಚಿಸುತ್ತದೆ.
          ಕೂದಲಿನ ದಪ್ಪವನ್ನು ಹೆಚ್ಚಿಸುವುದು: ನುಗ್ಗೆ ಸೊಪ್ಪಿನಲ್ಲಿ ಒಮೆಗಾ -3 ನ ಸಮೃದ್ಧ ಮೂಲವಾಗಿದ್ದು, ಇದು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕೂದಲಿಗೆ ಹಚ್ಚಿದಾಗ, ಅದರಲ್ಲಿರುವ ಒಮೆಗಾ -3 ನೇರವಾಗಿ ಕೂದಲಿಗೆ ಲಭಿಸುವುದು. ಜೊತೆಗೆ ಇದು ಪೋಷಣೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವುದು.
        ಕೂದಲಿನ ಬೆಳವಣಿಗೆಗೆ ಸಹಾಯ: ನುಗ್ಗೆ ಸೊಪ್ಪಿನಲ್ಲಿ ಸತು, ವಿಟಮಿನ್ ಎ ಮತ್ತು ಕಬ್ಬಿಣವಿದ್ದು, ಇದು ಕೂದಲಿನ ಬೆಳವಣಿಗೆಗೆ ಬಹಳ ಅವಶ್ಯಕವಾಗಿದೆ. ಸತುವು ನೆತ್ತಿಯಲ್ಲಿರುವ ತೈಲ ಗ್ರಂಥಿಗಳನ್ನು ಆರೋಗ್ಯಕರವಾಗಿಸುವುದರ ಮೂಲಕ ನೆತ್ತಿಯಲ್ಲಿ ಕೂದಲು ಬೆಳೆಯಲು ಅನುಕೂಲವಾದ ವಾತಾವರಣವನ್ನು ನಿರ್ಮಿಸುವುದು.
           ನುಗ್ಗೆ ಸೊಪ್ಪಿನ ಉತ್ತಮ ಅನುಕೂಲವನ್ನು ಪಡೆಯುವ ಅದನ್ನು ಬಳಸುವ ವಿವಿಧ ವಿಧಾನಗಳು: ಕೂದಲಿಗೆ ಎಣ್ಣೆಯಾಗಿ: ತೆಂಗಿನ ಎಣ್ಣೆ, ಜೊಜೊಬಾ ಎಣ್ಣೆ ಅಥವಾ ಹರಳೆಣ್ಣೆಯೊಂದಿಗೆ ದುರ್ಬಲಗೊಳಿಸುವ ಎಣ್ಣೆಯಾಗಿ ನುಗ್ಗೆ ಸೊಪ್ಪಿನ ಎಣ್ಣೆಯನ್ನು ಹಚ್ಚಬಹುದು. ಹೇರ್ ಪ್ಯಾಕ್: ನುಗ್ಗೆ ಸೊಪ್ಪಿನ ಪುಡಿಯನ್ನು ಮೊಸರು, ರೋಸ್ ವಾಟರ್ ಮತ್ತು ಅಕ್ಕಿ ನೀರಿನಂತಹ ದ್ರಾವಕದೊಂದಿಗೆ ಬೆರೆಸಿ, ಹಚ್ಚುವುದು. ಹೇರ್ ಟೋನರ್: ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ, ಅದರ ನೀರನ್ನು ಟೋನರ್ ಆಗಿ ಬಳಸಬಹುದು.



       

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries